Connect with us

LATEST NEWS

ಭಾರಿ ಮಳೆಗೆ ಸರ್ಕಿಟ್‌ ಹೌಸ್‌ ಬಳಿ ಕುಸಿದ ಗುಡ್ಡ

ಮಂಗಳೂರು ಅಗಸ್ಟ್ 1: ಮಂಗಳೂರಿನಲ್ಲಿ ಭಾರಿ ಮಳೆಯ ಪರಿಣಾಮ ನಗರದ ಸರ್ಕಿಟ್‌ ಹೌಸ್‌ ಬಳಿ ಭೂ ಕುಸಿತ ಉಂಟಾಗಿದೆ. ಸುಮಾರು 20 ಮೀಟರ್ ಉದ್ದಕ್ಕೆ ಭೂಕುಸಿತ ಉಂಟಾಗಿದ್ದು, ಸ್ಥಳಕ್ಕೆ ಕದ್ರಿ ಸಂಚಾರಿ ಪೊಲೀಸರು ಆಗಮಿಸಿದ್ದು ಕುಸಿದ ಮಣ್ಣನ್ನು ತಾತ್ಕಾಲಿಕವಾಗಿ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.


ಕಳೆದ ಭಾರಿಯೂ ಇದೇ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿತ್ತು, ಈಗಾಗಲೇ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೆ ಅಪಾಯ ಇನ್ನೂ ಜಾಸ್ತಿಯಾಗುವ ಆತಂಕ ಎದುರಾಗಿದ್ದು, ಸರ್ಕಿಟ್‌ ಹೌಸ್‌ ನೂತನ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

Facebook Comments

comments