Connect with us

    DAKSHINA KANNADA

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವತಿಯರ ತಂಡದಿಂದ ಪತ್ರಕರ್ತನಿಗೆ ಅವಮಾನ

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವತಿಯರ ತಂಡದಿಂದ ಪತ್ರಕರ್ತನಿಗೆ ಅವಮಾನ

    ಮಂಗಳೂರು.ಜನವರಿ 31: ಖ್ಯಾತ ಪತ್ರಕರ್ತ ರಿಪಬ್ಲಿಕ್ ಟಿವಿಯ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿಗೆ ಇಂಡಿಗೋ ವಿಮಾನದಲ್ಲಿ ಮುಜುಗರ ಉಂಟುಮಾಡಿದಂತಹುದೇ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪೋಸ್ಟ್ ಕಾರ್ಡ್ ವೆಬ್ ಸೈಟ್ ನ ಸಂಪಾದಕ ಮಹೇಶ್ ವಿಕ್ರಂ ಹೆಗಡೆ ಈ ಬಾರಿ ಮುಜುಗರಕ್ಕೆ ಒಳಗಾದ ಪತ್ರಕರ್ತರಾಗಿದ್ದಾರೆ.

    ಕಟೀಲು ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶ ಕಾರ್ಯಕ್ರಮ ಮುಗಿಸಿ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕುಳಿತಿದ್ದ ವಿಕ್ರಮ್ ಹೆಗ್ಡೆ ಬಳಿ ಬಂದ ಯುವತಿಯರ ತಂಡವೊಂದು ಅವರಲ್ಲಿ ವಂದೇ ಮಾತರಂ ನ ಎರಡು ಲೈನ್ ಹಾಡುವಂತೆ ಒತ್ತಾಯಿಸಿದೆ.

    ಪೋಸ್ಟ್ ಕಾರ್ಡ್ ವೆಬ್ ಸೈಟ್ ನಲ್ಲಿ ಬರೆದ ಹಾಗೆ ಅಲ್ಲ ಎಲ್ಲವೂ ಎಂದಿತಲ್ಲದೆ, ಸಾರ್ವಜನಿಕವಾಗಿ ಅವರನ್ನು ಹೀಯಾಳಿಸುವ ಕೆಲಸವನ್ನೂ ಯುವತಿಯರ ತಂಡ ಮಾಡಿದೆ.

    ಈ ಎಲ್ಲಾ ಘಟನೆಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯುವ ಮೂಲಕ ಪತ್ರಕರ್ತನಿಗೆ ಮುಜುಗರವಾಗುವಂತೆ ಮಾಡಿದೆ.

    ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಮಾಡಿದೆ.

    ಆದರೆ ವಿಕ್ರಮ್ ಹೆಗಡೆ ಯುವತಿಯರ ಈ ಕುಕೃತ್ಯಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೆ ನಗುತ್ತಾ ಮೌನಕ್ಕೆ ಶರಣಾಗಿದ್ದಾರೆ.

    ಒಂದು ವೇಳೆ ವಿಕ್ರಮ್ ಹೆಗ್ಡೆ ಕೂಡಾ ಯುವತಿಯರಂತೆ ತಮ್ಮ ಬೆಂಬಲಿಗರನ್ನು ವಿಮಾನ ನಿಲ್ದಾಣಕ್ಕೆ ಕರೆಸಿ ಇದೇ ರೀತಿಯ ಅನಾಗರಿಕ ವರ್ತನೆ ತೋರಿಸುತ್ತಿದ್ದಲ್ಲಿ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿತ್ತು ಎನ್ನುವ ಸಾಮಾನ್ಯ ಜ್ಞಾನ ಈ ಇಂಗ್ಲಿಷ್ ಮಾತನಾಡುವ ಈ ಯುವತಿಯರ ತಂಡಕ್ಕೆ ಇಲ್ಲದೇ ಹೋಗಿರುವುದು ಸೋಜಿಗದ ಸಂಗತಿಯೂ ಆಗಿದೆ.

    ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದ್ದು, ಘಟನೆಯ ಕುರಿತು ವಿರೋಧವೂ ಕೇಳಿ ಬರುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply