LATEST NEWS
ಲೇಡಿಸ್ ಪಿಜಿಯಿಂದ ಬಟ್ಟೆ ಕದಿಯುತ್ತಿದ್ದ ವಿಕೃತ ಕಾಮಿಗೆ ಬಿತ್ತು ಧರ್ಮದೇಟು
ಮಂಗಳೂರು: ಯುವತಿಯರ ಪಿಜಿಯಿಂದ ಬಟ್ಟೆ ಕದಿಯುತ್ತಿದ್ದ ವಿಕೃತ ಕಾಮಿಗೆ ಕೊನೆಗೆ ಹುಡುಗಿಯರೇ ಧರ್ಮದೇಟು ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸ್ ರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆ ಯುವತಿಯರೇ ವಿಕೃತ ಕಾಮಿಗೆ ಬುದ್ದಿ ಕಲಿಸಿದ್ದಾರೆ.
ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನ ಬಳಿಯ ಲೇಡಿಸ್ ಪಿಜಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ವಿಕೃತ ಕಾಮಿಯೊಬ್ಬ ಬಂದು ಯುವತಿಯರ ಬಟ್ಟೆ ಕದಿಯುತ್ತಿದ್ದ. ಈ ಹಿಂದೆ ಎರಡು ಬಾರಿ ಈತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಮರುದಿನವೇ ಆತನನ್ನು ಬಿಟ್ಟು ಕಳುಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ನಿನ್ನೆ ತಡರಾತ್ರಿಯೂ ಏಕಾಏಕಿ ವಿಕೃತಕಾಮಿ ಯುವತಿಯೊಬ್ಬಳ ರೂಮ್ ಪ್ರವೇಶಿಸಿ ಆಕೆಯ ಬಟ್ಟೆಯನ್ನು ಟೆರೇಸ್ ಮೇಲೆ ಕೊಂಡೊಯ್ದು ಇಟ್ಟಿದ್ದ. ಇದು ಗಮನಕ್ಕೆ ಬಂದು ಎಲ್ಲ ಯುವತಿಯರು ಹುಡುಕಾಟ ನಡೆಸಿದ್ದು ಈ ವೇಳೆ ಆತ ಟೆರೇಸ್ ಮೇಲೆ ಪತ್ತೆಯಾಗಿದ್ದಾನೆ. ಹಾಗೇ ಸಿಕ್ಕಿದವನಿಗೆ ಯುವತಿಯರೇ ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವತಿಯರ ಧರ್ಮದೇಟಿಗೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ.

ಸಾಂದರ್ಭಿಕ ಚಿತ್ರ
ಕೇರಳ ಮೂಲದ ಆರೋಪಿ ವಿಕೃತ ಚೇಷ್ಟೆಯಿಂದಾಗಿ ಪಿಜಿ ಯುವತಿಯರು ಭಯಬಿದ್ದಿದ್ದಾರೆ. ಈ ಹಿಂದೆ ಎರಡು ಬಾರಿ ಇಂತಹದ್ದೇ ಪ್ರಕರಣ ಜರುಗಿದ್ದರೂ ಪೊಲೀಸರು ಕಠಿಣ ಕ್ರಮ ಜರುಗಿಸದೇ ಇರುವುದು ಮತ್ತೊಮ್ಮೆ ಘಟನೆ ಮರುಕಳಿಸಲು ಕಾರಣ ಎಂದು ಯುವತಿಯರು ದೂರಿದ್ದಾರೆ.
Facebook Comments
You may like
ಮಂಗಳೂರು ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ.. ಸುಮಂಗಲಾ ರಾವ್ ಉಪ ಮೇಯರ್
ಮದುವೆ ಸಂಭ್ರಮ ಮಗಿಯುವ ಮೊದಲೆ ಹೃದಯಾಘಾತಕ್ಕೆ ಬಲಿಯಾದ ನವವಧು
ಕಾಡಾನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದಾ ಯುವಕ ಅಪ್ಪಚ್ಚಿ!
ಮತ್ತೆ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆ.. ಫೆಬ್ರವರಿಯಲ್ಲಿ ಇದು 16ನೇ ಬಾರಿ
ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಪತ್ತೆ..ಮುಂದುವರೆದ ವಿಕೃತಿ
ಕಾಸರಗೋಡು ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ – ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
You must be logged in to post a comment Login