Connect with us

MANGALORE

ಕ್ಯಾರ್ ಚಂಡಮಾರುತಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳ ರಕ್ಷಣೆ

ಕ್ಯಾರ್ ಚಂಡಮಾರುತಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳ ರಕ್ಷಣೆ

ಮಂಗಳೂರು ಅ.26: ಮಂಗಳೂರಿನಲ್ಲಿ ಕ್ಯಾರ್ ಚಂಡಮಾರುತಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಫಿಶಿಂಗ್ ಬೋಟ್‍ಗಳನ್ನು ರಕ್ಷಿಸಲಾಗಿದೆ. ಮಂಗಳೂರಿನ ಎನ್‍ಎಂಪಿಟಿ ಬಂದರಿನಲ್ಲಿ ಈ ಬೋಟ್ ಗಳಿಗೆ ಆಶ್ರಯ ನೀಡಲಾಗಿದ್ದು, ನವಬಂದರು ಯಾರ್ಡ್ ನಲ್ಲಿ ಸುರಕ್ಷಿತವಾಗಿ ಲಂಗರು ಹಾಕಲಾಗಿದೆ.

ಸಮುದ್ರದಿಂದ ವಾಪಸಾಗುತ್ತಿದ್ದ ವೇಳೆ ಬೋಟ್‍ಗಳು ಬಿರುಗಾಳಿಗೆ ಸಿಲುಕಿದ್ದವು. ಸದ್ಯ ಬೋಟ್ ಗಳಲ್ಲಿದ್ದ ಸಾವಿರಕ್ಕೂ ಮಿಕ್ಕಿ ಮೀನುಗಾರರಿಗೆ ಬಂದರು ಯಾರ್ಡ್ ನಲ್ಲಿ ಆಶ್ರಯ ನೀಡಲಾಗಿದೆ. ಚಂಡಮಾರುತ ಪರಿಣಾಮ ತೀರಕ್ಕೆ ಬರಲಾಗದೆ ಮೀನುಗಾರರು ಪರದಾಡಿದ್ದರು. ಈ ವೇಳೆ ಕೋಸ್ಟ್ ಗಾರ್ಡ್ ಪಡೆಗಳು ಬೋಟ್‍ಗಳನ್ನು ರಕ್ಷಣೆ ಮಾಡಿವೆ.

Facebook Comments

comments