Connect with us

    LATEST NEWS

    ಕುಂದಾಪುರ – ಚಾಕಲೇಟ್ ಗಂಟಲಲ್ಲಿ ಸಿಲುಕಿ 6 ವರ್ಷ ಪ್ರಾಯದ ಬಾಲಕಿ ಸಾವು….!!

    ಉಪ್ಪುಂದ ಜುಲೈ 20: ಚಾಕಲೇಟ್ ಗಂಟಲಲ್ಲಿ ಸಿಲುಕಿದ ಪರಿಣಾಮ ಬಾಲಕಿಯೊಬ್ಬಳು ಸಾವನಪ್ಪಿರುವ ಘಟನೆ ಉಪ್ಪುಂದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಬೈಂದೂರು ತಾಲೂಕು ಬವಳಾಡಿ ಮೂಲದ ಸಮನ್ವಿ (6) ಎಂದು ಗುರುತಿಸಲಾಗಿದ್ದು. ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್ ವಿದ್ಯಾರ್ಥಿನಿ.


    ಶಾಲೆಯ ಬಸ್ಸಿಗೆ ಕಾಯುತ್ತಿರುವ ಸಂದರ್ಭ ಸಮನ್ವಿ ಪ್ಲಾಸ್ಟಿಕ್ ಕವರ್ ಸಮೇತ ಚಾಕ್ಲೆಟ್ ತಿಂದಿದ್ದಾಳೆ. ಹೀಗೆ ತಿಂದ ಚಾಕ್ಲೆಟ್ ಗಂಟಲಲ್ಲಿ ಸಿಲುಕಿಕೊಂಡು ಬಾಲಕಿ ಉಸಿರುಗಟ್ಟಿ ಶಾಲಾ ವಾಹನದಲ್ಲೇ ಸಾವನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
    ಸದ್ಯ ಬಾಲಕಿಯ ಮೃತದೇಹವನ್ನು ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply