ಕುಂದಾಪುರ ಮಾರ್ಚ್ 01: ಟ್ರೆಕ್ಕಿಂಗ್ ಗೆ ತೆರಲಿದ್ದ ವೇಳೆ ನದಿಯಲ್ಲಿ ಮುಳುಗಿ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಹೊಸಂಗಡಿಯ ಭಾಗಿಮನೆ ಬಳಿ ಮಾರ್ಚ್ 1ರ ರವಿವಾರ ನಡೆದಿದೆ.


ಮೃತರನ್ನು ಕುಂದಾಪುರದ ಮೆಡಿಕಲ್ ಶಾಪ್‌ ವೊಂದರ ಮಾಲಕಿ ಶುಭಶ್ರೀ ಕಾರಂತ್ ( 53) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ 8-10 ಜನರ ತಂಡ ಹೊಸಂಗಡಿಯ ಮೆಟ್ಕಲ್ ಗುಡ್ಡ ಕಡೆಗೆ ಟ್ರೆಕ್ಕಿಂಗ್ ಹೋಗಿದ್ದರು ಎಂದು ತಿಳಿದು ಬಂದಿದೆ. ಮೃತದೇಹವನ್ನು‌ ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ‌ಕಲೆಹಾಕಿದ್ದಾರೆ. ಹೆಚ್ಚಿನ‌ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Share Information