ಕುಂದಾಪುರ ಮಿನಿವಿಧಾನ ಸೌಧ ಸ್ಲ್ಯಾಬ್ ಕುಸಿದು ಸಿಬ್ಬಂದಿಗೆ ಗಂಭೀರ ಗಾಯ

ಉಡುಪಿ ಅಗಸ್ಟ್ 17: ಕುಂದಾಪುರ ಮಿನಿ ವಿಧಾನ ಸೌಧದ ಸ್ಲ್ಯಾಬ್ ಕುಸಿದು ಬಿದ್ದು ಸಹಾಯಕ ಆಯುಕ್ತ ಕಚೇರಿಯ ಸಿಬ್ಬಂದಿಯೋರ್ವರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಗಾಯಗೊಂಡ ಸಿಬ್ಬಂದಿಯನ್ನು ನಾರಾಯಣ ಎಂದು ಗುರುತಿಸಲಾಗಿದೆ. 2015ರಲ್ಲಿ ಮೆ. ಶೆಟ್ಟಿ ಕನಸ್ಟ್ರಕ್ಷನ್ ಕಂಪೆನಿ ಈ ವಿಧಾನ ಸೌಧದ ಕಾಮಗಾರಿಯನ್ನು ನಡೆಸಿದ್ದರು. ಕುಂದಾಪುರ ಮಿನಿ ವಿಧಾನಸೌಧ ಕಳಪೆ ಕಾಮಗಾರಿಯಿಂದಲೇ ಕುಖ್ಯಾತಿ ಪಡೆದಿದ್ದು, ಉದ್ಘಾಟನೆಗೊಂಡ ಮೊದಲ ವರ್ಷದಲ್ಲೇ ನೀರು ಸೋರಲಾರಂಭಿಸಿತ್ತು, ಅಲ್ಲದೆ ಕೆಲವು ಕಡೆ ಮೆಲ್ಚಾವಣೆ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಈಗ ಎರಡನೇ ಬಾರಿ ಮತ್ತೆ ಮಿನಿ ವಿಧಾನ ಸೌಧದ ಮೇಲ್ಚಾವಣೆ ಕುಸಿದು ಬಿದ್ದಿದೆ.

ಈ ಬಾರಿ ಸ್ಲಾಪ್ ಬಿದ್ದ ಪರಿಣಾಮ ಸಹಾಯಕ ಆಯುಕ್ತ‌ ಕಛೇರಿಯ ಸಿಬ್ಬಂದಿಯೋರ್ವರು‌ ಗಂಭೀರ ಗಾಯಗೊಂಡಿದ್ದಾರೆ.

VIDEO

Facebook Comments

comments