Connect with us

LATEST NEWS

ಜೂನ್ 21 ಸೂರ್ಯ ಗ್ರಹಣ ಹಿನ್ನಲೆ ಕುಕ್ಕೆ ಸುಬ್ರಹ್ಮಣ್ಯ ಪೂಜಾ ಸಮಯದಲ್ಲಿ ವ್ಯತ್ಯಯ

ಸುಬ್ರಹ್ಮಣ್ಯ ಜೂನ್ .17: ಚಂದ್ರಗ್ರಹಣದ ಬಳಿಕ ಜೂನ್ ತಿಂಗಳ ಎರಡನೇ ಗ್ರಹಣ ಅಂದರೆ ಸೂರ್ಯಗ್ರಹಣ ಜೂನ್ 21 ಕ್ಕೆ ಸಂಭವಿಸಲಿದೆ. ಈ ಗ್ರಹಣದ ಸೂತಕ ಕಾಲ ಮಾನ್ಯವಿರಲಿದ್ದು, ಗ್ರಹಣ ವರ್ಷದ ದೀರ್ಘಾವಧಿ ದಿನದಂದು ಸಂಭವಿಸಲಿರುವ ಕಾರಣ ಇದು ಭಾರಿ ವಿಶೇಷತೆ ಪಡೆದುಕೊಂಡಿದೆ.

ಈ ಹಿನ್ನಲೆ   ಜೂನ್ 21ರ ಸೂರ್ಯಗ್ರಹಣ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ನಿತ್ಯದ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ. ದೇವರ ದರ್ಶನದ ಸಮಯ ಬೆಳಗ್ಗೆ 6.30 ಗಂಟೆಯಿಂದ 10.00ರವರೆಗೆ ಮತ್ತು ಅಪರಾಹ್ನ 3.30 ಗಂಟೆಯಿಂದ 5.30ರವರೆಗೆ ನಡೆಯಲಿರುವುದು ಭಕ್ತಾದಿಗಳು ಸಹಕರಿಸಬೇಕು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಾರಿಯ ಸೂರ್ಯಗ್ರಹಣ 21 ಜೂನ್ 2020 ರ ಬೆಳಗ್ಗೆ 10.20 ಕ್ಕೆ ಆರಂಭವಾಗಲಿದ್ದು, ಮಧ್ಯಾಹ್ನ 3.04ಕ್ಕೆ ಅಂತ್ಯವಾಗಲಿದೆ. ಮಧ್ಯಾಹ್ನ 12.02ಕ್ಕೆ ಇದು ಉಚ್ರಾಯ ಸ್ಥಿತಿಯಲ್ಲಿ ಇರಲಿದೆ.

Facebook Comments

comments