ಕುಕ್ಕೆ ಸುಬ್ರಹ್ಮಣ್ಯ ಜನವರಿ 22: ದೇಶದ ಪ್ರಖ್ಯಾತ ನಾಗಕ್ಷೇತ್ರ ಹಾಗೂ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದೇವಲಾಯದಲ್ಲಿ 2025ರ ನವಂಬರ್, ಡಿಸೆಂಬರ್ ತಿಂಗಳಲ್ಲಿ ಒಟ್ಟು ₹14.77ಕೋಟಿ ಆದಾಯ ಬಂದಿದೆ.


ನವೆಂಬರ್‌ನಲ್ಲಿ ವಿವಿಧ ಸೇವೆಗಳಿಂದ ₹4.56 ಕೋಟಿ, ಹುಂಡಿಯಿಂದ ₹1.09 ಕೋಟಿ ಹಾಗೂ ಅನ್ನದಾನ ನಿಧಿಯಿಂದ ₹83.57 ಲಕ್ಷ ಆದಾಯ ಬಂದಿದೆ. ಡಿಸೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ ₹5.30ಕೋಟಿ, ಹುಂಡಿಯಿಂದ ₹1.90 ಕೋಟಿ, ಅನ್ನದಾನ ನಿಧಿಯಿಂದ ₹1.07‌ ಕೋಟಿ ಆದಾಯ ಬಂದಿದೆ. ‘ಉಳಿದಂತೆ, ವಸತಿಗೃಹ ಹಾಗೂ ಇತರ ಮೂಲಗಳಿಂದ ಬಂದ ಆದಾಯವೂ ಇದರಲ್ಲಿ ಸೇರಿದೆ.

Share Information