ಬೆಂಗಳೂರು,ಫೆಬ್ರವರಿ 15: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರ ಹೆಚ್ಚಳವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಮಾಹಿತಿ ನೀಡಿದ್ದಾರೆ.

ನಾಳೆಯಿಂದಲೇ ಈ ನೂತನ ಪರಿಷ್ಕ್ರತ ದರ ಜಾರಿಯಾಗಲಿದ್ದು ಡಿಸೇಲ್, ಸಿಬ್ಬಂದಿ ಹಾಗೂ ಇತರೆ ಖರ್ಚುಗಳ ಹಿನ್ನೆಲೆ ಲಗೇಜ್ ದರ ಏರಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಕೆಎಸ್‌ಆರ್‌ಟಿಸಿಯಿಂದ ಪರಿಷ್ಕೃತ ಲಗೇಜ್ ದರ ಪಟ್ಟಿ ರಿಲೀಸ್ ಆಗಿದ್ದು 1ರಿಂದ 5 ಸ್ಟೇಜ್‌ವರೆಗೆ 6 ರೂ., 6ರಿಂದ 12 ಸ್ಟೇಜ್‌ವರೆಗೆ 12 ರೂ., 156 ರಿಂದ 160 ಸ್ಟೇಜ್‌ವರೆಗೆ 145 ರೂ ಗಳವರೆಗೆ ಏರಿಕೆ ಮಾಡಲಾಗಿದೆ. ಈ ಮೊದಲು 2021ರಲ್ಲಿ ಲಗೇಜ್ ದರ ಏರಿಕೆಯಾಗಿತ್ತು. ಆ ಬಳಿಕ ಲಗೇಜ್ ದರ ಏರಿಕೆಯಾಗಿರಲಿಲ್ಲ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.



