Connect with us

LATEST NEWS

ಕರಾವಳಿ ಜಿಲ್ಲೆಗಳಲ್ಲಿ ಕೆಎಸ್ಆರ್ ಟಿಸಿ ಮುಷ್ಕರಕ್ಕೆ ಬೆಂಬಲ..ರಸ್ತೆಗಿಳಿಯದ ಸರಕಾರಿ ಬಸ್

ಉಡುಪಿ ಡಿಸೆಂಬರ್ 14: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಎಸ್ ಆರ್ ಟಿಸಿ ನೌಕರರ ಪ್ರತಿಭಟನೆಗ ಬೆಂಬಲ ವ್ಯಕ್ತವಾಗಿದ್ದು, ಕೆಎಸ್ಆರ್ ಟಿಸಿ ಬಸ್ ಸಂಚಾರ ಬಹುತೇಕ ಸ್ತಬ್ದವಾಗಿದೆ.


ಕೆಎಸ್ ಆರ್ ಟಿಸಿ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ನಡೆಸುತ್ತಿರುವ ಕೆಎಸ್ಆರ್ ಟಿಸಿ ಮುಷ್ಕರ 5 ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 4 ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಕೆಎಸ್ಆರ್ ಟಿಸಿ ಮುಷ್ಕರಕ್ಕೆ ಅಷ್ಟಾಗಿ ಬೆಂಬಲ ವ್ಯಕ್ತವಾಗಿರಲಿಲ್ಲ. ಆದರೆ ಇಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದ್ದು ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ದವಾಗಿದೆ.


ಉಡುಪಿಯಲ್ಲಿ ಮೈಸೂರು, ಚಿಕ್ಕಮಗಳೂರು, ಬೆಳಗಾವಿ ಭಾಗಕ್ಕೆ ಹೋಗಬೇಕಾಗಿದ್ದ ಬಸ್ಸುಗಳು ನಿಲ್ದಾಣದಲ್ಲೇ ಇದ್ದು, ಜಿಲ್ಲೆಯೊಳಗೆ ಮಾತ್ರ ಸೀಮಿತ ನಗರ ಸಂಚಾರದ ಸರ್ಕಾರಿ ಓಡಾಟ ನಡೆಸುತ್ತಿವೆ.

ಮಂಗಳೂರಿನಿಂದ ಈವರೆಗೆ ಕೆಎಸ್ಆರ್ ಟಿಸಿ ಸಂಚಾರ ನಡೆಸಿಲ್ಲ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಗೂ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಾಸರಗೋಡು,ಪುತ್ತೂರು, ಧರ್ಮಸ್ಥಳಕ್ಕೆ ಯಾವುದೇ ಬಸ್ ಸಂಚಾರ ಇಲ್ಲದಂತಾಗಿದ್ದು, ಮಂಗಳೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ನಿನ್ನೆಯ ವರೆಗೆ ಸಂಚಾರ ನಡೆಸಿದ್ದ ಕೆಎಸ್ಆರ್ ಟಿಸಿ ಬಸ್ ಗಳು ಇಂದು ಏಕಾಏಕಿ ಸ್ಥಗಿತಗೊಂಡಿದೆ.

Facebook Comments

comments