Connect with us

    LATEST NEWS

    Video: ಚಾಲಕ ಮತ್ತು ಕಂಡಕ್ಟರ್ ನಡುವೆ ಹೊಡಿಮಗ ಹೊಡಿಮಗ ಗಲಾಟೆ….!!

    ಕಾರ್ಕಳ ಜನವರಿ 30: ರಸ್ತೆ ಮಧ್ಯೆ ಖಾಸಗಿ ಬಸ್ ಕಂಡಕ್ಟರ್ ಮತ್ತು ಕೆಎಸ್ ಆರ್ ಟಿಸಿ ಬಸ್ ಚಾಲಕರಿಬ್ಬರು ಹೊಡೆದಾಡಿಕೊಂಡ ಘಟನೆ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಉಡುಪಿ ಕಾರ್ಕಳ ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಬಸ್ ಗೆ ಸೈಡ್ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಸರಕಾರಿ ಬಸ್ ಚಾಲಕನಿಗೆ ಅವಾಚ್ಯವಾಗಿ ಖಾಸಗಿ ಬಸ್ ಕಂಡಕ್ಟರ್ ನಿಂದಿಸಿದ್ದು, ಇದರಿಂದ ಕೋಪಗೊಂಡು ಕಂಡಕ್ಟರ್ ಮೇಲೆ ಬಸ್ ಚಾಲಕ ಸೈಯದ್ ಚಪ್ಪಲಿಯಲ್ಲಿ ಹೊಡೆದಿದ್ದಾರೆ.

    ಕೆಎಸ್ಆರ್‌‌ಟಿಸಿ ಚಾಲಕನ ಮೇಲೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..

    VIDEO

     

    Share Information
    Advertisement
    Click to comment

    You must be logged in to post a comment Login

    Leave a Reply