ಜೆಡಿಎಸ್ ಒಮ್ಮೆ ಸ್ನೇಹ, ಒಮ್ಮೆ ದ್ವೇಷ ಬೆಳೆಸುವ ಪಕ್ಷ – ದಿನೇಶ್ ಗುಂಡೂರಾವ್

ಉಡುಪಿ ನವೆಂಬರ್ 6: ಜೆಡಿಎಸ್ ಒಮ್ಮೆ ಸ್ನೇಹ, ಒಮ್ಮೆ ದ್ವೇಷ ಬೆಳೆಸುವ ಪಕ್ಷವಾಗಿದ್ದು, ಸಿದ್ದಾಂತವೇ ಇಲ್ಲದೆ ಯಾರು ಸಹಾಯ ಮಾಡುತ್ತಾರೋ ಅವರ ಜೊತೆಗೆ ಹೋಗುವ ಪಾರ್ಟಿ ಅದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಬಿಜೆಪಿ- ಜೆಡಿಎಸ್ ಉಪಚುನಾವಣೆ ಒಪ್ಪಂದ ವಿಚಾರದಲ್ಲಿ ದೇವೇಗೌಡ- ಯಡಿಯೂರಪ್ಪ ಯಾರು ಸತ್ಯ ಯಾರು ಸುಳ್ಳು? ಅನ್ನೊದು ತಿಳಿಯುತ್ತಾ ಇಲ್ಲ. ಈ ಗೊಂದಲ ಸೃಷ್ಟಿ ಮಾಡಿದ್ದು ಜೆಡಿಎಸ್ ಪಕ್ಷದವರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿದ್ದು, ಮುಂದೆ ಏನು ಮಾಡುತ್ತಾರೊ ಅವರಿಗೆ ಬಿಟ್ಟದ್ದು ಎಂದರು. ಆದರೆ ಕಾಂಗೇರ್ಸ್ ಪಕ್ಷ ಮಾತ್ರ ಬಿಜೆಪಿ ವಿರುದ್ಧ ನಿರಂತರ ಹೋರಾಟ ಮಾಡಲಿದೆ ಎಂದರು.

ಸುಪ್ರೀಂ ನಲ್ಲಿ ಯಡಿಯೂರಪ್ಪ ಆಡಿಯೋ ಪ್ರಕರಣದಲ್ಲಿ ಆಡಿಯೋ ಕೋರ್ಟ್ ನ ಗಮನಕ್ಕೆ ಬಂದಿದೆ. ಸಿಎಂ ಯಡಿಯೂರಪ್ಪ, ಅಮಿತ್ ಶಾ ಪಾತ್ರ ಜಗಜ್ಜಾಹಿರಾಗಿದೆ. ಸಂವಿಧಾನ ಬಾಹಿರ ಕೆಲಸದಲ್ಲಿ ಅಮಿತ್ ಶಾ ಶಾಮೀಲಾಗಿದ್ದಾರೆ .ಬಿಜೆಪಿಯವರ ನೇತೃತ್ವದಲ್ಲಿ ನಡೆದದ್ದೆಲ್ಲಾ ಸಂವಿಧಾನ ಕಾನೂನು ಒಪ್ಪುತ್ತಾ.? ಕಾಂಗ್ರೆಸ್ ಗೆ ಒಂದು ನ್ಯಾಯ ಬಿಜೆಪಿಗೆ ಒಂದ ನ್ಯಾಯನಾ? ಎಂದು ಪ್ರಶ್ನಿಸಿದರು.

ಈಶ್ವರಪ್ಪನಿಗೆ ಸ್ವಾಭಿಮಾನ ಇಲ್ಲ, ಸ್ವಾಭಿಮಾನಿ ಆಗಿದ್ದರೆ ಮಂತ್ರಿ ಆಗಬಾರದಿತ್ತು, ಉಪಮುಖ್ಯಮಂತ್ರಿ ಯಾಗಿದ್ದವರು ಈಗ ಮಂತ್ರಿಯಾಗಿದ್ದಾರೆ. ಅವರ ಜೂನಿಯರ್ ಗಳು ಡಿಸಿಎಂ ಆಗಿರುವಾಗ ಇವರು ಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

Facebook Comments

comments