ಕೋಝಿಕೋಡ್ ಫೆಬ್ರವರಿ 11: ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ವಿಡಿಯೋ ಮಾಡಿ ಅಮಾಯಕ ಯುವಕ ದೀಪಕ್ ಸಾವಿಗೆ ಕಾರಣಳಾಗಿದ್ದ ಶಿಮ್ಜಿತಾ ಮುಸ್ತಫಾಗೆ(shimjitha musthafa) ಕೋಝಿಕೋಡ್ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿದೆ.

ಆರೋಪಿ ಶಿಂಜಿತಾ ಮುಸ್ತಫಾ ಬಸ್ ನಲ್ಲಿ ದೀಪಕ್ ನನಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ವಿಡಿಯೋ ಮಾಡಿ ಅದನ್ನು ವೈರಲ್ ಮಾಡಿದ್ದಳು, ಬಳಿಕ ಜನವರಿ 18 ರಂದು ಕೋಝಿಕ್ಕೋಡ್ ನಗರದ ಗೋವಿಂದಪುರಂ ಬಳಿಯ ತನ್ನ ಮನೆಯಲ್ಲಿ ದೀಪಕ್ ಆತ್ಮಹತ್ಯೆಗೆ ಶರಣಾಗಿದ್ದರು. ಇದು ಇಡೀ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ಜನವರಿ 22ರಂದು ಶಿಮ್ಜಿತಾಳನ್ನು ಬಂಧಿಸಲಾಗಿತ್ತು. 19 ದಿನಗಳ ನ್ಯಾಯಾಂಗ ಬಂಧನದ ನಂತರ ಅವರಿಗೆ ಜಾಮೀನು ನೀಡಲಾಗಿದೆ.
ಇದನ್ನೂ ಓದಿ – ಪುಟಾಣಿ ಮಕ್ಕಳ ಮೇಲೆ ಹರಿದ ಶಾಲಾ ಬಸ್ – ಇಬ್ಬರ ಧಾರುಣ ಸಾವು
ವಶಪಡಿಸಿಕೊಂಡ ಮೊಬೈಲ್ ಫೋನ್ಗೆ ಸಂಬಂಧಿಸಿದ ವಿಧಿವಿಜ್ಞಾನ ವರದಿಗಳು ಇನ್ನೂ ಹೊರಬರಬೇಕಿದೆ ಮತ್ತು ಜಾಮೀನು ನಡೆಯುತ್ತಿರುವ ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ಉಲ್ಲೇಖಿಸಿ ಪ್ರಾಸಿಕ್ಯೂಷನ್ ಜಾಮೀನನ್ನು ವಿರೋಧಿಸಿತ್ತು.