Connect with us

    KARNATAKA

    ನನ್ನ ಹೆಸರು ಕೋವಿಡ್ ಕಪೂರ್ ಆದರೆ ನಾನು ವೈರಸ್ ಅಲ್ಲ ..ಬೆಂಗಳೂರು ಉದ್ಯಮಿ ಹೆಸರಿನ ಕಥೆ

    ಬೆಂಗಳೂರು : ಕೋವಿಡ್ ಹೆಸರು ಕೇಳಿದರೆ ಇಡೀ ಜಗತ್ತು ಬೆಚ್ಚಿ ಬೀಳುತ್ತದೆ. ಅಂಥದ್ದರಲ್ಲಿ ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಹೆಸರು ಕೋವಿಡ್ ಕಪೂರ್ ಎಂದು. ಉದ್ಯಮಿಯ ಈ ಹೆಸರು ಕೇಳಿದೊಡನೆ ಜನರು ಅಚ್ಚರಿಪಡುತ್ತಿದ್ದಾರೆ.


    ವಾಸ್ತವವಾಗಿ ಕೋವಿದ್ ಎನ್ನುವುದು ಹನುಮಾನ್ ಚಾಲೀಸ್‍ನಲ್ಲಿರುವ ಪದವಾಗಿದೆ. ವಿದ್ವಾಂಸ, ಎಲ್ಲವನ್ನೂ ಬಲ್ಲವನು ಎನ್ನುವ ಅರ್ಥವನ್ನು ನೀಡುತ್ತದೆ. ಈ ಹಿನ್ನಲೆ ಕೋವಿಡ್ ಕಪೂರ್ ಅವರ ತಂದೆತಾಯಿ ಅವರಿಗೆ ಕೋವಿಡ್ ಕಪೂರ್ ಎಂದು ಹೆಸರಿಟ್ಟಿದ್ದರು. ಆದರೆ ಸಾಂಕ್ರಾಮಿಕ ನಂತರ ಅದರ ಅರ್ಥವೇ ಬದಲಾಗಿದೆ ಎಂದು ಕೋವಿದ್ ಕಪೂರ್ ಹೇಳಿದ್ದಾರೆ.


    2019ರಲ್ಲಿ ಈ ಕೋವಿಡ್- 19 ಸಾಂಕ್ರಾಮಿಕ ಆರಂಭಕ್ಕೂ ಮೊದಲು ಹೆಸರನ್ನು ಕೇಳಿ ಅಚ್ಚರಿಪಡುತ್ತಿದ್ದರು. ಕೊರೊನಾ ಸಾಂಕ್ರಾಮಿಕದ ಹೆಸರನ್ನು ವ್ಯಕ್ತಿಗೆ ಇಟ್ಟಿರುವುದನ್ನು ಕೇಳಿ ಗೊಂದಲಕ್ಕೆ ಒಳಗಾಗುತ್ತಾರೆ, ನಂತರ ನಗಲು ಆರಂಭಿಸುತ್ತಿದ್ದಾರೆ. ಬೆಂಗಳೂರಿಂದ ಶ್ರೀಲಂಕಾವರೆಗೆ ಕೋವಿದ್ ಕಪೂರ್ ಅವರ ಹೆಸರು ಗೊಂದಲ ಉಂಟು ಮಾಡಿದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯೂ ಈ ಹೆಸರು ಕೇಳಿ ನಗುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply