ರಾಜಸ್ತಾನ ಜನವರಿ 06: ಕಳ್ಳನೊಬ್ಬ ಮನೆಯೊಂದಕ್ಕೆ ಕದಿಯಲು ಬಂದು ಮನೆಯ ಎಕ್ಸಾಸ್ಟ್ ಫ್ಯಾನ್ ನ ಕಿಟಕಿಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ರಾಜಸ್ತಾನದ ಬೋರ್ಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಾಪ್ ನಗರದಲ್ಲಿ ನಡೆದಿದೆ.


ಸೋಮವಾರದ ಮಧ್ಯರಾತ್ರಿ ಇಬ್ಬರು ಕಳ್ಳರು ಮನೆಯೊಂದರ ಕಳ್ಳತನಕ್ಕೆ ಯತ್ನಿಸಿದ್ದಾರೆ. ಓರ್ವ ಕಳ್ಳ ಮನೆಯ ಒಳಗಡೆ ನುಗ್ಗಲು ಮನೆಯ ಎಕ್ಸಾಸ್ಟ್ ಫ್ಯಾನ್ ನನ್ನು ತೆಗೆದು ಅದರ ಕಿಟಕಿಯಲ್ಲಿ ನುಗ್ಗಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಕಳ್ಳ ಅಲ್ಲೆ ಸಿಕ್ಕಿಹಾಕಿಕೊಂಡಿದ್ದು,. ವಾಪಾಸ್ ಬರಲು ಆಗದೆ ಮುಂದೆ ಹೋಗಲು ಆಗದೆ ಸಿಕ್ಕಿಹಾಕಿಕೊಂಡಿದ್ದು, ಈ ವೇಳೆ ಹೊರಗಡೆ ಹೋಗಿದ್ದ ಮನೆಯವರು ಬಂದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಜೊತೆಗಿದ್ದ ಇನ್ನೊಬ್ಬ ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ- ಕೋಟ – ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಪಿಯುಸಿ ವಿಧ್ಯಾರ್ಥಿ

ಮನೆ ಮಾಲೀಕ ಸುಭಾಷ್ ಕುಮಾರ್ ರಾವತ್ ಅವರು ತಮ್ಮ ಪತ್ನಿ ಜೊತೆ ಜನವರಿ 3 ರಂದು ಕಾರ್ಯ ನಿಮಿತ್ತ ಹೊರಗೆ ಹೋಗಿದ್ದರು. ಭಾನುವಾರ ತಡರಾತ್ರಿ ಮನೆಗೆ ಬಂದಾಗ, ಮನೆಯ ಎಕ್ಸಾಸ್ಟ್ ಫ್ಯಾನ್ ನಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ಹೊರಗೆ ತೆಗೆದು ವಿಚಾರಣೆ ನಡೆಸಿದಾರೆ. ಈ ವೇಳೆ ಕಳ್ಳತನ ಎಲ್ಲಾ ವಿಚಾರ ಬಾಯಿಬಿಟ್ಟಿದ್ದಾನೆ. ಬಂಧಿತ ಆರೋಪಿಯನ್ನು ಕೋಟಾ ಜಿಲ್ಲೆಯ ದಿಗೋಡ್ ಗ್ರಾಮದ ನಿವಾಸಿ ಪವನ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಕಾರಿನಲ್ಲಿ ಪೊಲೀಸ್ ಎಂಬ ಸ್ಟಿಕ್ಕರ್ ಕೂಡ ಪತ್ತೆಯಾಗಿದ್ದು, ಕಳ್ಳರು ಕಳ್ಳತನ ಮಾಡಲು ಮನೆಯನ್ನು ಹುಡುಕಲು ಕಾರನ್ನು ಬಳಸುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಸದ್ಯ ಕಳ್ಳ ಎಕ್ಸಾಸ್ಟ್ ಫ್ಯಾನ್ ಕಿಟಕಿಯಲ್ಲಿ ಸಿಕ್ಕಿಹಾಕಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

Share Information