Connect with us

    UDUPI

    ನಿವೃತ್ತಿ ದಿನದ ಬಿಳ್ಕೋಡುಗೆ ಸಮಾರಂಭದಲ್ಲಿ ಕುಸಿದು ಬಿದ್ದು ಮೃತಪಟ್ಟ ಕೋಟ ಎಎಸೈ

    ನಿವೃತ್ತಿ ದಿನದ ಬಿಳ್ಕೋಡುಗೆ ಸಮಾರಂಭದಲ್ಲಿ ಕುಸಿದು ಬಿದ್ದು ಮೃತಪಟ್ಟ ಕೋಟ ಎಎಸೈ

    ಕೋಟ ಜೂನ್ 3 : ತನ್ನ ನಿವೃತ್ತಿ ದಿನದ ಬಿಳ್ಕೋಡುಗೆ ಸಮಾರಂಭದಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಕೋಟ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಆನಂದ ವೆಂಕಟರಾಮ್(60) ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ನಿವೃತ್ತಿಯಾಗಿರುವ ಇವರಿಗೆ ಇದೆ ಭಾನುವಾರ ಕೋಟ ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಊಟ ಮಾಡುತ್ತಿದ್ದ ಇವರು ಅಲ್ಲೇ ಕುಸಿದು ಬಿದ್ದು ತೀವ್ರವಾಗಿ ಅಸ್ವಸ್ಥರಾದರೆನ್ನಲಾಗಿದೆ. ಮೆದಳಿನ ಸಂಬಂಧದ ಕಾಯಿಲೆಗೆ ತುತ್ತಾಗಿದ್ದ ಇವರು, ಚಿಕಿತ್ಸೆ ಫಲಕಾರಿ ಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
    ಬೈಂದೂರು ನಿವಾಸಿಯಾಗಿರುವ ಆನಂದ್, ಮೂಡುಬಿದ್ರೆ, ಕೋಟ, ಶಂಕರ ನಾರಾಯಣ, ಗಂಗೊಳ್ಳಿ, ಕಾಪು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply