Connect with us

    LATEST NEWS

    ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ – ದಾಖಲೆಯ 1.53 ಕೋಟಿ ಹುಂಡಿ ಹಣ ಸಂಗ್ರಹ

    ಉಡುಪಿ ಮೇ 11: ದಕ್ಷಿಣಭಾರತದ ಪ್ರಖ್ಯಾತ ದೇವಾಲಯ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾವದಲ್ಲಿ ಹುಂಡಿ ಹಣ ಏಣಿಕೆ ಕಾರ್ಯ ನಡೆದಿದ್ದು, ದಾಖಲೆಯ 1.53 ಕೋಟಿ ಹಣ ಸಂಗ್ರಹವಾಗಿದೆ.


    ಕೋವಿಡ್ ನಿರ್ಬಂಧಗಳ ಸಡಿಲಿಕೆ ಬಳಿಕ ದೇವಸ್ಥಾನಕ್ಕೆ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಈ ಹಿನ್ನಲೆ ದೇವಳದ ಆದಾಯದಲ್ಲೂ ಏರಿಕೆಯಾಗಿದೆ.

    ಹುಂಡಿಯಲ್ಲಿ 1,53,41,923 ರೂ ನಗದು 2.500 ಕೆಜಿ ಬಂಗಾರ ಮತ್ತು 4.200 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇದೇ ಮೊದಲಬಾರಿ 1.53 ಕೋಟಿ ನಗದು ಸಂಗ್ರಹವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply