Connect with us

    LATEST NEWS

    ಜುಲೈ 12 ರಂದು ನಂದಿನಿ ತೃಪ್ತಿ ಹಾಲು ಉಚಿತ

    ಜುಲೈ 12 ರಂದು ನಂದಿನಿ ತೃಪ್ತಿ ಹಾಲು ಉಚಿತ

    ಉಡುಪಿ, ಜುಲೈ 11:   ದಕ್ಷಿಣ ಕನ್ನಡ ಹಾಲು ಒಕ್ಕೂಟದ ಹಾಲು ಸಂಗ್ರಹಣೆ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಯೋಜನವನ್ನು ನಂದಿನಿ ಗ್ರಾಹಕರಿಗೆ ವಿಸ್ತರಿಸುವ ಉದ್ದೇಶದಿಂದ , ಜುಲೈ 12 ರಂದು, ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ  ಗ್ರಾಹಕರು ಖರೀದಿಸುವ ಪ್ರತಿ ಪ್ಯಾಕೆಟ್ ( 500 ಮಿಲೀ, 1 ಲೀ, 6 ಲೀ ) ನಂದಿನಿ ಹಾಲಿನ ಪ್ಯಾಕೇಟ್ ನೊಂದಿಗೆ , 90 ದಿನದಷ್ಟು  ದೀರ್ಘಕಾಲ ಬಾಳಿಕೆ ಬರುವ ,  ನಂದಿನಿ ತೃಪ್ತಿ ಹಾಲಿನ ಪ್ಯಾಕೆಟ್ ನ್ನು (180 ಮಿ.ಲೀ) ಉಚಿತವಾಗಿ ನೀಡಲು ಗ್ರಾಹಕ ಸ್ನೇಹಿ ಯೋಜನೆ ರೂಪಿಸಿದ್ದು, ನಂದಿನಿ ಗ್ರಾಹಕರಿಗೆ ಅಂದಾಜು 62 ಲಕ್ಷ ರೂ ಮೌಲ್ಯದ ತೃಪ್ತಿ ಹಾಲನ್ನು ಉಚಿತವಾಗಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ  ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.

     ಜುಲೈ 12 ರಂದು ನೀಡಲಾಗುವ ಉಚಿತ ತೃಪ್ತಿ ಹಾಲನ್ನು ಮನೆ ಮನೆಗೆ ವಿತರಿಸುವವರಿಗೂ ಸಹ ಗ್ರಾಹಕರಿಗೆ ವಿತರಿಸುವಂತೆ ಸೂಚನೆ ನೀಡಲಾಗಿದೆ, ಎಲ್ಲಾ ಡೀಲರ್ ಗಳಿಗೆ ಸಹ ಉಚಿತ ಹಾಲು ವಿತರಣೆ ಕುರಿತಂತೆ ಮಾಹಿತಿ ನೀಡಲಾಗಿದ್ದು, ಅಗತ್ಯ ವಿರುವ ಒಟ್ಟು 6.5 ಲಕ್ಷ ನಂದಿನಿ ತೃಪ್ತಿ ಹಾಲಿನ ಪ್ಯಾಕೆಟ್ ಗಳನ್ನು ಸಿದ್ದಪಡಿಸಲಾಗಿದ್ದು, ಗ್ರಾಹಕರಿಗೆ ಸಮರ್ಪಕ ರೀತಿಯಲ್ಲಿ ವಿತರಣೆಯಾಗುವುದನ್ನು ಪರಿಶೀಲಿಸಲು ಉಸ್ತುವಾರಿ ತಂಡಗಳನ್ನು ರಚಿಸಲಾಗಿದೆ.

    ಗ್ರಾಹಕರಿಗೆ ಯಾವುದೆ ಲೋಪವಾಗದಂತೆ ಎಲ್ಲರಿಗೂ ಪ್ರಯೋಜನ ದೊರಕಿಸಿಕೊಡಲು ಉದ್ದೇಶಿಸಲಾಗಿದೆ, ಹಾಲು ಉತ್ತಮ ಸಮತೋಲಿತ ಆಹಾರವಾಗಿದ್ದು,  ಉತ್ತಮ ಆರೋಗ್ಯದ ದೃಷ್ಠಿಯಿಂದ , ಕಲಬೆರಕೆಯಿಲ್ಲದೇ ಅತ್ಯಂತ ಪರಿಶುದ್ದವಾಗಿರುವ ನಂದಿನಿ ಹಾಲನ್ನು ಮಕ್ಕಳಿಂದ ವಯೋ ವೃದ್ದರ ವರೆಗೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಳಸುವಂತೆ  ರವಿರಾಜ್ ಹೆಗ್ಡೆ ಹೇಳಿದರು.

    ಉಪ್ಪೂರು ನಲ್ಲಿ ಅಂದಾಜು 100 ಕೋಟಿ ರೂ  ವೆಚ್ಚದಲ್ಲಿ  ನಿರ್ಮಾಣವಾಗುತ್ತಿರುವ 2.50 ಲಕ್ಷ ಲೀ ಸಾಮರ್ಥ್ಯದ  ನೂತನ ಡೇರಿ ಸ್ಥಾವರ ಈ ವಷಾಂತ್ಯದ ವೇಳೆಗೆ ಉದ್ಘಾಟನೆಯಾಗಲಿದ್ದು, ಸಂಪೂರ್ಣ ಆಟೋಮೇಟಿಕ್ ವ್ಯವಸ್ಥೆಯಿಂದ ಕೂಡಿರಲಿದೆ ಎಂದು ಅಧ್ಯಕ್ಷರು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply