ಬಿಗ್ ಬಾಸ್ ಸೀಸನ್ 12 ರಲ್ಲಿ ಧೃವಂತ್ ಗೆ ಇಡೀ ಸೀಸನ್ ಚಪ್ಪಾಳೆ ಕೊಟ್ಟದ್ದಕ್ಕಾಗಿ ಪರ ವಿರೋಧ ಚರ್ಚೆಗಳು ನಡಿತಾ ಇದೆ. ಇದರಿಂದ ಸುದೀಪ್ ರನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೋಲ್ ಮಾಡುವ ಮೂಲಕ ಅವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ವಿರೋಧಗಳ ಬಗ್ಗೆ ಜಾಸ್ತಿಯಾಗಿ ತಲೆಕೆಡಿಸಿಕೊಂಡಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಗಿಲ್ಲಿ ಅಭಿಮಾನಿಗಳು ಇಡೀ ಸೀಸನ್ ಚಪ್ಪಾಳೆ ಧ್ರುವಂತ್ ಗೆ ನೀಡಿದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ರನ್ನ ತರಾಟೆಗೆ ತೆಗೆದುಕೊಂಡಿದ್ದರು.

ಅಷ್ಟೇ ಅಲ್ಲದೆ ಸುದೀಪ್ ರನ್ನು ವ್ಯಂಗ್ಯವಾಡುವ ಮೂಲಕ ಸುದ್ದಿಯಾಗುತ್ತಿದೆ. ಇದಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 10’ರ ಸಂದರ್ಭದಲ್ಲಿ ಸುದೀಪ್ ಅವರನ್ನು ಸೋಶಿಯಲ್ ಮೀಡಿಯದಲ್ಲಿ ಟೀಕಿಸಲಾಯಿತು. ಈ ಟೀಕೆಯ ಸಂದರ್ಭದಲ್ಲಿ ಸುದೀಪ್ ಒಂದು ಮಾತನ್ನು ಹೇಳಿದ್ದರು. ‘ನನಗಾಗೇ ದುಡ್ಡು ಕೊಟ್ಟು ಸೃಷ್ಟಿಸಿದ ಟ್ರೋಲ್ ಪೇಜ್ಗಳಿವೆ. ನಾನು ಗುಡ್ ಮಾರ್ನಿಂಗ್ ಎಂದರೆ ನಿನ್ನ ಗುಡ್ ಮಾರ್ನಿಂಗ್ ಯಾರಿಗೆ ಬೇಕು ಎನ್ನುತ್ತಾರೆ. ಅವರು ನನ್ನ ಬಗ್ಗೆ ಮಾತನಾಡುತ್ತಾರೆ. ನಾನು ಮಜಾ ತೆಗೆದಿಕೊಳ್ಳುತ್ತೇನೆ. ಕಿತ್ತೋದ್ ಕೆಲಸ ನಾನಂತೂ ಮಾಡಿಲ್ಲ. ಅವರ ಟ್ರೋಲ್ ಬಗ್ಗೆ ನಂಗೆ ಬೇಸರ ಇಲ್ಲ. ಏಕೆಂದರೆ ನನ್ನಿಂದ ಅವರ ಹೊಟ್ಟೆ ಪಾಡು ನಡೆಯುತ್ತಿದೆ’ ಎಂದು ಕಿಚ್ಚ ಹೇಳಿದ್ದರು.

ಕಿಚ್ಚ ಸುದೀಪ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆದಿದೆ. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಆಗುವ ಚರ್ಚೆ ಬಗ್ಗೆ ಸುದೀಪ್ ಅವರು ಮಾತನಾಡಿದ್ದು ಇದೆ. ಆದರೆ ಈ ವಾರ ಆ ಬಗ್ಗೆ ಮಾತನಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ –ಗಿಲ್ಲಿ ಅಡುಗೆಗೆ ಕಾದು ಕಾದು ಸುಸ್ತಾದ ಮನೆ ಮಂದಿ
‘ಮೊಟ್ಟ ಮೊದಲ ಕಿಚ್ಚನ ಸೀಸನ್ ಚಪ್ಪಾಳೆ’ ಎಂದು ಧ್ರುವಂತ್ ಅವರ ಫೋಟೋವನ್ನು ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಅದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈಗ ‘ಈ ವಾರದ ಕಿಚ್ಚನ ಚಪ್ಪಾಳೆ’ ಎಂದು ಹೊಸ ಪೋಸ್ಟ್ ಹಾಕಲಾಗಿದೆ. ಈ ಮೊದಲ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಲಾಗಿದೆ.



