LATEST NEWS
ಉಡುಪಿ ಬಸ್ರೂರ್ ನಲ್ಲಿ ಕೆಜಿಎಫ್ ಸ್ಟಾರ್ ಯಶ್….!!
ಉಡುಪಿ: ಕೆಜಿಎಫ್ ಸಿನೆಮಾ ಬಿಡುಗಡೆಗೆ ಕಾಯುತ್ತಿರುವ ರಾಕಿಂಗ್ ಸ್ಟಾರ್ ನಟ ಯಶ್ ಉಡುಪಿ ಬಸ್ರೂರ್ ನಲ್ಲಿದ್ದು, ಸ್ಥಳೀಯ ಹುಡುಗರೊಂದಿಗೆ ಕ್ರಿಕೆಟ್ ಆಡುವ ಮೂಲಕ ಜಾಲಿ ಮೂಡ್ ನಲ್ಲಿದ್ದಾರೆ.
ಕೆಜಿಎಫ್ ಗೆ ಸಂಗೀತ ನಿರ್ದೇಶನ ಮಾಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕೆಜಿಎಫ್ ಸಿನೆಮಾ ಸಂಗೀತಕ್ಕೆ ಫೈನಲ್ ಟಚ್ ನೀಡುತ್ತಿದ್ದಾರೆ. ಈ ರವಿ ಬಸ್ರೂರ್ ಅವರ ಹುಟ್ಟೂರಾದ ಕುಂದಾಪುರ ತಾಲೂಕಿನ ಬಸ್ರೂರ್ ಗೆ ಆಗಮಿಸಿರುವ ನಟ ಯಶ್, ತಮ್ಮ ಬಿಡುವಿನ ವೇಳೆ ಸ್ಥಳೀಯ ಯುವಕರೊಂದಿಗೆ ಕ್ರಿಕೆಟ ಆಟ ಆಡಿ ಕಾಲ ಕಳೆದಿದ್ದಾರೆ.
ಇಂದು ಆನೆಗುಡ್ಡೆ ಶ್ರೀ ವಿನಾಯತ ದೇವಸ್ಥಾನಕ್ಕೆ ಆಗಮಿಸಿದ ನಟ ಯಶ್ ದೇವರ ದರ್ಶನ ಪಡೆದರು. ಯಶ್ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.