ಬೆಂಗಳೂರು ಡಿಸೆಂಬರ್ 18: ಸೂಪರ್ ಹಿಟ್ ಚಿತ್ರ ಕೆಜಿಎಫ್–2, ಸಲಾರ್ ಸಿನಿಮಾದ ಸಹ ನಿರ್ದೇಶಕ ಕೀರ್ತನ್ ನಾಡಗೌಡ ಅವರ 4 ವರ್ಷದ ಮಗ ಲಿಪ್ಟ್ ನಲ್ಲಿ ಸಿಲುಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ.


ಕೀರ್ತನ್ ನಾಡಗೌಡ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ದಂಪತಿ ಪುತ್ರ ಚಿರಂಜೀವಿ ಸೋನಾರ್ಶ್ ಕೆ.ನಾಡಗೌಡ ದುರಂತ ಸಾವು ಕಂಡಿದ್ದಾನೆ. ಮಗು ಲಿಫ್ಟ್‌ನಲ್ಲಿ ಸಿಲುಕಿಕೊಂಡು ಸಾವಿಗೀಡಾಗಿದೆ. ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ
ಕೀರ್ತನ್ ನಾಡಗೌಡ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಟ, ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌, ‘ಲಿಫ್ಟ್‌ನಲ್ಲಿ ಸಿಲುಕಿ ನಿರ್ದೇಶಕ ಕೀರ್ತನ್‌ ನಾಡಗೌಡ ಅವರ ಮಗ ಸೋನಾರ್ಶ್ ಕೆ. ನಾಡಗೌಡ ಮೃತಪಟ್ಟಿರುವ ವಿಷಯ ತಿಳಿದು ತುಂಬಾ ದುಃಖವಾಯಿತು.

ಕೀರ್ತನ್‌ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್‌ ಅವರಿಗೆ ನನ್ನ ಸಂತಾಪಗಳು. ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಅವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.
ಸೋಮವಾರ ಈ ದುರ್ಘಟನೆ ಸಂಭವಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಕೀರ್ತನ್‌ ಅವರ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಕನ್ನಡ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿರುವ ಕೀರ್ತನ್‌ ಅವರು, ಪ್ರಶಾಂತ್ ನೀಲ್‌ ಅವರೊಂದಿಗೆ ಕೆಜಿಎಫ್‌ 2, ಸಲಾರ್‌ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ

Share Information