Connect with us

FILM

ಬಿಡುಗಡೆ ಮೊದಲೇ ಕೆಜಿಫ್-2 ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಲೀಕ್!

ಬೆಂಗಳೂರು, ಜನವರಿ 07: ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾದ ಟೀಸರ್ ಲೀಕ್ ಆಗಿದ್ದಕ್ಕೆ ನಟ ಯಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಅಭಿಮಾನಿಗಳು ನಿರಾಶರಾಗದಂತೆ ಮನವಿ ಮಾಡಿದ್ದಾರೆ.

ಈ ಕುರಿತು ವಿಡಿಯೋ ಸಂದೇಶ ಹಂಚಿಕೊಳ್ಳುವ ಮೂಲಕ ಮಾತನಾಡಿರುವ ಯಶ್, ನಾಳೆ ಬೆಳಗ್ಗೆ ರಿಲೀಸ್ ಆಗಬೇಕಿದ್ದ ಟೀಸರ್ ಯಾರೋ ಪುಣ್ಯಾತ್ಮರು ಲೀಕ್ ಮಾಡಿದ್ದಾರೆ. ಅವರಿಗೆ ಏನ್ ಸಂತೋಷ ಸಿಗುತ್ತೋ ಗೊತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಅಭಿಮಾನಿಗಳು ತುಂಬಾ ಆಸೆಗಳನ್ನು ಇಟ್ಟುಕೊಂಡು ಸಂಭ್ರಮಿಸಲು ಕಾಯುತ್ತಿದ್ದಿರಿ.
ಇದೀಗ ಹೊಂಬಾಳೆ ಯೂಟ್ಯೂಬ್ ಚಾನಲ್‍ನಲ್ಲಿ ರಾತ್ರಿ 9.29ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಟೀಸರ್ ನೋಡಿ, ಸಿನಿಮಾ ಇನ್ನೂ ಬಾಕಿ ಇದೆ ಎಂದು ತಿಳಿಸಿದ್ದಾರೆ.


ಶುಕ್ರವಾರ ಬೆಳಗ್ಗೆ 10:18ಕ್ಕೆ ಬಿಡುಗಡೆಯಾಗಬೇಕಿದ್ದ ಕೆಜಿಎಫ್ ಚಾಪ್ಟರ್ 2 ಟೀಸರ್ ಇಂದು ರಾತ್ರಿ 9:29ಕ್ಕೆ ಬಿಡುಗಡೆಯಾಗಿದೆ. ಒಟ್ಟು 2 ನಿಮಿಷ 16 ಸೆಕೆಂಡ್ ವಿಡಿಯೋ ಇದ್ದು ಇದರರಲ್ಲಿ ರಾಕಿ ಬಾಯ್ ಯಶ್, ಅಧೀರ ಸಂಜಯ್ ದತ್, ರಮೀಕಾ ಸೇನ್ ರವೀನಾ ಟಂಡನ್, ರೀನಾ ದೇಸಾಯಿ ಶ್ರೀನಿಧಿ ಶೆಟ್ಟಿ ಪಾತ್ರವನ್ನು ತೋರಿಸಲಾಗಿದೆ. ವಿಶೇಷವಾಗಿ ರಾಕಿ ಬಾಯ್ ಮಿಷನ್ ಗನ್‍ನಿಂದ ಜೀಪುಗಳ ಮೇಲೆ ಫೈರ್ ಮಾಡಿದ್ದು, ಎರಡು ಜೀಪುಗಳು ಮೇಲಕ್ಕೆ ಹಾರಿವೆ. ಬಳಿಕ ಫೈರ್ ಮಾಡಿದ ಕೆಂಪಾದ ಗನ್‍ನಿಂದ ರಾಕಿ ಸಿಗರೇಟ್ ಹೊತ್ತಿಸುತ್ತಿರುವ ದೃಶ್ಯವನ್ನು ತೋರಿಸಲಾಗಿದೆ.

ಶುಕ್ರವಾರ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಗಿಫ್ಟ್ ನೀಡಲು ಟೀಸರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಇಂದು ರಾತ್ರಿ ದಿಢೀರ್ ಆಗಿ ಕೆಜಿಎಫ್ ಸಿನಿಮಾ ಟೀಸರ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ಟ್ರೆಂಡಿಂಗ್ ಆಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಗುರುವಾರ ರಾತ್ರಿ 9:02ಕ್ಕೆ ಟ್ವೀಟ್ ಮಾಡಿ ರಾತ್ರಿ 9:29ಕ್ಕೆ ರಿಲೀಸ್ ಮಾಡುತ್ತೇವೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು.
ವಿಶೇಷವಾಗಿ ರಾಕಿ ಬಾಯ್ ಮಿಷನ್ ಗನ್‍ನಿಂದ ಜೀಪುಗಳ ಮೇಲೆ ಫೈರ್ ಮಾಡಿದ್ದು, ಎರಡು ಜೀಪುಗಳು ಮೇಲಕ್ಕೆ ಹಾರಿವೆ. ಬಳಿಕ ಫೈರ್ ಮಾಡಿದ ಕೆಂಪಾದ ಗನ್‍ನಿಂದ ರಾಕಿ ಸಿಗರೇಟ್ ಹೊತ್ತಿಸುತ್ತಿರುವ ದೃಶ್ಯವನ್ನು ತೋರಿಸಲಾಗಿದೆ.

VIDEO: