ಬೆಳ್ತಂಗಡಿ ಸೆಪ್ಟೆಂಬರ್ 08: ಧರ್ಮಸ್ಥಳದ ಶವಹೂತ ಪ್ರಕರಣದ ತನಿಖೆ ನಡೆಸುತ್ತಿರು ಎಸ್ಐಟಿ ತನ್ನ ವಿಚಾರಣೆಯನ್ನು ಮುಂದುವರೆಸಿದ್ದು, ಕಳೆದ ಮೂರ್ನಾಲ್ಕು ದಿನದಿಂದ ಗಿರೀಶ್ ಮಟ್ಟೆಣ್ಣವರ್, ಜಯಂತ್ ಟಿ ವಿಚಾರಣೆ ನಡೆಯುತ್ತಿದೆ, ಇಂದೂ ಕೂಡಾ ವಿಚಾರಣೆಗಾಗಿ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದಾರೆ. ಕೇರಳ ಯುಟ್ಯೂರ್ ಮನಾಫ್ ನನ್ನು ಕೂಡ ಎಸ್ ಐಟಿ ವಿಚಾರಣೆಗೆ ಆಗಮಿಸಿದ್ದಾನೆ.

ಧರ್ಮಸ್ಥಳ ಪ್ರಕರಣ ವಿಚಾರ ಕೇರಳದಲ್ಲಿ ಯ್ಯೂಟ್ಯೂಬ್ ಮೂಲಕ ಸುದ್ದಿ ಹಂಚಿದ ವಿಚಾರವಾಗಿ ಮನಾಫ್ ಗೆ ಎಸ್ಐಟಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿತ್ತು. ಅದರಂತೆ ಸೆ.8 ರಂದು ಮಧ್ಯಾಹ್ನ ಎಸ್ಐಟಿ ಕಚೇರಿಗೆ ಹಾಜರಾಗಿದ್ದಾರೆ. ಮನಾಫ್ ಜತೆಗೆ ಯ್ಯೂಟ್ಯೂಬರ್ ಅಭಿಷೇಕ್ ಕೂಡ ವಿಚಾರಣೆಗೆ ಹಾಜರಾಗಿದ್ದು, ಎಸ್ಐಟಿ ನೋಟಿಸ್ ನೀಡಿದಂತೆ ಹಾಜರಾಗಲಿದ್ದೇವೆ. ಸತ್ಯಾಸತ್ಯೆ ಬಗ್ಗೆ ಎಸ್ಐಟಿ ತನಿಖೆ ನಡೆಸಿಲಿದೆ. ಅವರ ಯಾವುದೇ ಪ್ರಶ್ನೆಗೆ ನಾವು ಉತ್ತರ ನೀಡಲಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಮನಾಫ್ ಜತೆಗೆ ಕೇರಳ ಮಾನವ ಹಕ್ಕುಗಳ ಆಯೋಗದ ಸದಸ್ಯರು ಜತೆಗಿದ್ದರು.

ವಿಠಲಗೌಡ ವಿಚಾರಣೆ ಶನಿವಾರದಿಂದ ನಡೆಯುತ್ತಿದೆ. ಇಂದೂ ಕೂಡಾ ವಿಚಾರಣೆಗೆ ಕರೆಯಲಾಗಿದೆ. ಹೀಗಾಗಿ ಎಸ್ ಐಟಿ ನಡೆ ಕುತೂಹಲಕ್ಕೆ ಕಾರಣವಾಗಿದೆ. ಬಂಗ್ಲೆಗುಡ್ಡೆಯಲ್ಲಿ ಶನಿವಾರ ಸ್ಥಳ ಮಹಜರು ನಡೆಸಿ, ವಿಠಲಗೌಡರನ್ನು ಕಳಿಸಲಾಗಿತ್ತು ಧರ್ಮಸ್ಥಳ ಎಸ್‌ಐಟಿ ತನಿಖೆ ವೇಳೆ ಏನೂ ಹೇಳಲು ಸಾಧ್ಯವಿಲ್ಲ. ತನಿಖೆಯಲ್ಲಿ ಎಲ್ಲಾ ಸತ್ಯ ಹೊರ ಬರುತ್ತೆ. ಎಸ್ ಐಟಿ ತನಿಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ಎಂದು ಬೆಮಗಳೂರಿನಲ್ಲಿ ಗೃಹಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.



