Connect with us

    DAKSHINA KANNADA

    ಕಾವ್ಯ ಆತ್ಮಹತ್ಯೆ ಪ್ರಕರಣ,ಯಾವುದೇ ತನಿಖೆಗೆ ಸಿದ್ಧ ; ಡಾ. ಮೋಹನ್ ಆಳ್ವ

    ಮಂಗಳೂರು, ಜುಲೈ 29 : : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ಕಾವ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಮಾಧ್ಯಮ ಅಥವಾ ವೈಯಕ್ತಿಕವಾಗಿ ಯಾರೇ ತನಿಖೆ ಮುಂದಾದರೂ ಯಾವುದೇ ತನಿಖೆಗೆ ಸಂಸ್ಥೆ ಸಿದ್ದವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರತಿಕ್ರಿಯಿಸಿದ್ದಾರೆ.
    ಜುಲೈ 20ರಂದು ಹಾಸ್ಟೆಲ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಡುತ್ತಿರುವ ವದಂತಿಗಳಿಗೆ ಅವರು ತಡವಾಗಿ ಪ್ರತಿಕ್ರಿಯಿಸಿದ್ದಾರೆ.ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ವಿನಃ ಕಾರಣ ಸಂಸ್ಥೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ ಕೊಲೆ ಪ್ರಕರಣ ಹಿಂದೆ ಎಂದಿಗೂ ನಡೆದಿಲ್ಲ. ಯಾವುದೇ ಅಪರಾಧ ನಡೆದರೆ ಅದು ಪೊಲೀಸ್ ತನಿಖೆಯಾಗಬೇಕು.ಆದರೆ ಸಮಾಜದಲ್ಲಿ ಗೊಂದಲ ಸೃಷ್ಠಿಸಿ, ಜವಾಬ್ದಾರಿಯು ಸ್ಥಾನದಲ್ಲಿರುವ ನನ್ನನು ಹಾಗೂ ಕಳೆದ ಎರಡುವರೆ ದಶಕಗಳಿಂದ ಪಾರದರ್ಶಕವಾಗಿ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಸಂಸ್ಥೆಯನ್ನು ಟಾರ್ಗೆಟ್ ಮಾಡುವುದರ ಮೂಲಕ ನಮಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ. ಸಂಸ್ಥೆಯಲ್ಲಿ ಕಲಿಯುತ್ತಿರುವ 26 ಸಾವಿರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ನಮ್ಮನ್ನೇ ನಂಬಿದ್ದಾರೆ., ಮಾಧ್ಯಮ ಅಥವಾ ವೈಯಕ್ತಿಕವಾಗಿ ಯಾರೇ ತನಿಖೆ ಮುಂದಾದರೂ ಯಾವುದೇ ತನಿಖೆಗೆ ಸಂಸ್ಥೆ ಸಿದ್ದವಿದೆ.ಕಾವ್ಯ ಆತ್ಮಹತ್ಯೆ ಪ್ರಕರಣವು ಸರಿಯಾದ ರೀತಿಯಲ್ಲಿ ತನಿಖೆಯಾಗಿ ಅತೀ ಶೀಘ್ರ ಸತ್ಯಾಂಶ ಹೊರಬರಲಿ ಎಂದು ಡಾ.ಎಂ ಮೋಹನ್ ಆಳ್ವ ತಿಳಿಸಿದ್ದಾರೆ.

    ಈ ಮಧ್ಯೆ ಕಾವ್ಯ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಮುಂಜಾನೆಯ ದಿನ ಕಾಲೇಜು ಕ್ಯಾಂಪಸ್ ನಲ್ಲಿ  ನಲ್ಲಿ ಕಾವ್ಯ ಓಡಾಡಿದ ಎನ್ನಲಾದ ಸಿ ಸಿ ಟಿವಿ ವಿಡಿಯೋ ಫೂಟೇಜ್ ನ್ನು ಸಂಸ್ಥೆ ಬಿಡುಗಡೆ ಮಾಡಿದೆ..

    Share Information
    Advertisement
    Click to comment

    You must be logged in to post a comment Login

    Leave a Reply