LATEST NEWS
ನನ್ನನ್ನು ರಂಗಸ್ಥಳದಿಂದ ಇಳಿಸಿದ್ದಲ್ಲ, ಬದಲಾಗಿ ಕಟೀಲು ತಾಯಿ ದುರ್ಗೆಯನ್ನು ರಂಗಸ್ಥಳದಿಂದ ಇಳಿಸಿದ್ದು – ಪಟ್ಲ ಸತೀಶ್ ಶೆಟ್ಟಿ
ನನ್ನನ್ನು ರಂಗಸ್ಥಳದಿಂದ ಇಳಿಸಿದ್ದಲ್ಲ, ಬದಲಾಗಿ ಕಟೀಲು ತಾಯಿ ದುರ್ಗೆಯನ್ನು ರಂಗಸ್ಥಳದಿಂದ ಇಳಿಸಿದ್ದು – ಪಟ್ಲ ಸತೀಶ್ ಶೆಟ್ಟಿ
ಮಂಗಳೂರು ನವೆಂಬರ್ 23: ರಂಗಸ್ಥಳದಲ್ಲಿ ಭಾಗವತಿಕೆಗೆ ಕೂತ ಸಂದರ್ಭ ರಂಗಸ್ಥಳದಿಂದ ಎಬ್ಬಿಸಿ ವಾಪಾಸ್ ಕಳಿಸಿರುವ ಘಟನೆಗೆ ಸ್ವತಃ ಪಟ್ಲ ಸತೀಶ್ ಶೆಟ್ಟಿ ಅವರೇ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಟ್ಲ ಸತೀಶ್ ಶೆಟ್ಟಿ ಇದು ನನ್ನ ಜೀವನದ ಅತ್ಯಂತ ನೋವಿನ ಕ್ಷಣ ಎಂದು ಭಾವುಕರಾಗಿ ಮಾಧ್ಯಮಗಳ ಮುಂದೆ ನೋವನ್ನು ತೋಡಿಕೊಂಡಿದ್ದಾರೆ.
ರಂಗಸ್ಥಳದಲ್ಲಿ ಭಾಗವತಿಕೆಗೆ ಕೂತುಕೊಳ್ಳುವ ಸಂದರ್ಭ,ಮೇಳದ ಸಂಚಾಲಕ ದೇವಿ ಪ್ರಸಾದ್ ಶೆಟ್ಟಿ ಅವರ ಬಳಗ ಏಕಾಏಕಿ ರಂಗಸ್ಥಳಕ್ಕೆ ದಾಳಿ ಮಾಡಿ ನನ್ನನ್ನು ರಂಗಸ್ಥಳದಿಂದ ಇಳಿಸಿ ಸಾವಿರಾರು ಕಲಾಭಿಮಾನಿಗಳ ಮುಂದೆ ನನಗೆ ಅವಮಾನ ಮಾಡಿದ್ದಾರೆ ಎಂದು ತಿಳಿಸಿದರು.
ನನಗೆ ಯಾವುದೇ ರೀತಿಯ ಸೂಚನೆಯನ್ನು ಕೂಡ ನೀಡಿಲ್ಲ ಎಂದ ಅವರು, ಇದು ನನ್ನನ್ನು ರಂಗಸ್ಥಳದಿಂದ ಇಳಿಸಿದ್ದಲ್ಲ, ಬದಲಾಗಿ ಕಟೀಲು ತಾಯಿ ದುರ್ಗೆಯನ್ನು ರಂಗಸ್ಥಳದಿಂದ ಇಳಿಸಿದ್ದಾಗಿ ಪಟ್ಲ ಸತೀಶ್ ಶೆಟ್ಟಿ ನುಡಿದಿದ್ದಾರೆ.
ಈ ತರಹದ ಪರಿಸ್ಥಿತಿ ಯಾವ ರಂಗ ಕಲಾವಿದನಿಗೂ ವೇದಿಕೆಯಲ್ಲೇ ಈ ರೀತಿಯ ಮಾಡಬಾರದಂತಹ ಅನ್ಯಾಯ ಮಾಡಿದ್ದಾರೆ. ಯಾರದ್ದೋ ಒಬ್ಬರ ಸ್ವಾರ್ಥ ಹಾಗೂ ದುರಂಹಾಕರಕ್ಕೆ ಕಟೀಲು ಮೇಳ ಬಲಿಯಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.