ತುಳು ಚಿತ್ರರಂಗದಲ್ಲಿ ದಾಖಲೆಯ 200 ಥಿಯೇಟರ್ ನಲ್ಲಿ “ಕಟಪಾಡಿ ಕಟ್ಟಪ್ಪ” ರಿಲೀಸ್

ಮಂಗಳೂರು ಮಾರ್ಚ್ 21: ಕೋಸ್ಟಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಬಹು ನಿರೀಕ್ಷಿತ ಚಿತ್ರ ಕಟಪಾಡಿ ಕಟ್ಟಪ್ಪ ಮಾರ್ಚ್ 29 ರಂದು ದೇಶದಾದ್ಯಂತ ತೆರೆ ಕಾಣಲಿದೆ. ಇದೇ ಮೊದಲ ಬಾರಿಗೆ 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಮೂಲಕ ತುಳು ಚಿತ್ರ ರಂಗದಲ್ಲೇ ಹೊಸ ದಾಖಲೆಯೊಂದು ನಿರ್ಮಾಣವಾಗಲಿದೆ ಎಂದು ಕಟಪಾಡಿ ಕಟ್ಟಪ್ಪ ಸಿನಿಮಾ ನಿರ್ಮಾಪಕ ರಾಜೇಶ್ ಬ್ರಹ್ಮಾವರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತುಳುಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ಕಟಪಾಡಿ ಕಟ್ಟಪ್ಪ ಸಿನಿಮಾ ನಿರ್ಮಾಪಕ ರಾಜೇಶ್ ಬ್ರಹ್ಮಾವರ್ , ತುಳು ಚಿತ್ರರಂಗದ ಮಾರುಕಟ್ಟೆಯನ್ನ ವಿಸ್ತರಿಸುವ ಉದ್ದೇಶದಿಂದ ಇತರ ಚಿತ್ರಗಳಿಗೂ ಅನುಕೂಲವಾಗುವಂತೆ ಪ್ರಥಮ ಬಾರಿಗೆ 200 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ.

[amazon_link asins=’B01L8ZI7U0′ template=’ProductLink’ store=’in-1′ marketplace=’IN’ link_id=’5f9c05ff-ff21-4e3f-9a57-8a60976ccb74′]

ಅಲ್ಲದೆ ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆಗಳು ಉಂಟಾಗಿದ್ದು ಈಗಾಗಲೇ ಮಾರ್ಚ್ 29ರಂದು ಸಿನಿಮಾ ಪ್ರದರ್ಶನಕ್ಕೆ ಮುಂಗಡ ಟಿಕೆಟ್ ಬುಕ್ ಆಗಿದ್ದು, ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಸಿದೆ ಎಂದು ಹೇಳಿದರು.

ಇನ್ನು ಕಟಪಾಡಿ ಕಟ್ಟಪ್ಪ ಚಿತ್ರದ ನಟಿಸಿರುವ ಖ್ಯಾತ ತುಳು ಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೋಡಿಯಾಲ್‍ಬೈಲ್ ಮಾತನಾಡಿ, ಮಂಗಳೂರಿನ ಜ್ಯೋತಿ , ಪಿವಿಆರ್, ಸಿನಿಪೊಲಿಸ್, ಬಿಗ್ ಸಿನಿಮಾಸ್‍ಗಳಲ್ಲಿ ಕಟಪಾಡಿ ಕಟ್ಟಪ್ಪ ಭರ್ಜರಿಯಾಗಿ ತೆರೆ ಕಾಣಲಿದೆ. ತುಳು ಚಿತ್ರರಂಗ ಬೆಳೆಯುತ್ತಿದೆ ಎಂಬುವುದಕ್ಕೆ ಸಾಕ್ಷಿ ದೊರಕಬೇಕಾಗಿದೆ.

ಕಟಪಾಡಿ ಕಟ್ಟಪ್ಪ ಚಿತ್ರ ತುಳು ಚಿತ್ರರಂಗದಲ್ಲಿ ಹೊಸ ಇತಿಹಾಸವಾಗಲಿದೆ ಎಂಬ ಭರವಸೆ ಇದೆ ಎಂದರು. ಈ ಸಂದರ್ಭ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಜೆ.ಪಿ ತೂಮಿನಾಡ್, ನಾಯಕನಟ ಉದಯ್ ಪೂಜಾರಿ ಬಳ್ಳಾಲ್ ಬಾಗ್, ನಟಿ ಚರಿಷ್ಮಾ ಸಾಲಿಯಾನ್ ಉಪಸ್ಥಿತರಿದ್ದರು.