LATEST NEWS
ಕಾಸರಗೋಡು – ಮಂಗಳೂರು ಸಂಚಾರದ ಪಾಸ್ ಅವಧಿ ವಿಸ್ತರಣೆ
ಮಂಗಳೂರು ಜುಲೈ 04: ಕಾಸರಗೋಡು – ಮಂಗಳೂರು ಮಧ್ಯೆ ದೈನಂದಿನ ಸಂಚಾರಕ್ಕೆ ನೀಡಿದ್ದ ಪಾಸ್ ಅವಧಿಯನ್ನು ಜುಲೈ 11 ರ ವರೆಗೆ ವಿಸ್ತರಣೆ ಮಾಡಲಾಗಿದೆ.
ಕೇರಳದ ಕಾಸರಗೋಡಿಗೆ ತೆರಳಲು ಮತ್ತು ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲು ಉಭಯ ಜಿಲ್ಲಾಡಳಿತಗಳಿಂದ ಪಾಸ್ ನೀಡಲಾಗಿತ್ತು. ಜೂನ್ 30ರ ವರೆಗೆ ಇದ್ದ ಪಾಸ್ ವ್ಯಾಲಿಡಿಟಿಯನ್ನು ಜುಲೈ ನಾಲ್ಕರ ವರೆಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಪಾಸ್ ಅವಧಿಯನ್ನು ಜುಲೈ 11ರ ವರೆಗೆ ವಿಸ್ತರಿಸಿ ದ.ಕ. ಜಿಲ್ಲಾಡಳಿತ ಆದೇಶ ಮಾಡಿದೆ.
ಹಾಗೆಂದು ದೈನಂದಿನ ಸಂಚಾರಕ್ಕಾಗಿ ನೀಡಿರುವ ಪಾಸ್ ಗಳನ್ನು ನವೀಕರಣ ಮಾಡುವ ಅಗತ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಜುಲೈ 4ರ ವರೆಗೆ ಮಾತ್ರ ಎಂದು ಈ ಹಿಂದೆ ಆದೇಶ ಮಾಡಿದ್ದಾಗ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲಾಗುತ್ತಾ ಅಥವಾ ಕೇರಳದ ಮಂದಿಯನ್ನು ಸಂಚಾರ ನಿರ್ಬಂಧಿಸುತ್ತಾರೆಯೇ ಅನ್ನುವ ಆತಂಕ ಎದುರಾಗಿತ್ತು.
Facebook Comments
You may like
ಕೇರಳ ಗಡಿ ಬಂದ್ – ಪ್ರಧಾನಿ ಮಧ್ಯಪ್ರವೇಶಕ್ಕೆ ಕೇರಳ ಸಿಎಂ ಒತ್ತಾಯ
ಕೇರಳ ಗಡಿ ಭಾಗದಲ್ಲಿ ಮತ್ತೆ ಕೋವಿಡ್ ತಪಾಸಣೆ , ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಕರ್ನಾಟಕ ಪ್ರವೇಕ್ಕೆ ಅವಕಾಶ: ಕೇರಳಿಗರಿಂದ ಪ್ರತಿಭಟನೆ
ಭಾರತೀಯ ಸೇನೆಯ ಗಮನ ತಪ್ಪಿಸಲು ಚೀನಾ ಸೇನೆಯ ಕುತಂತ್ರ, ಫಿಂಗರ್ 4 ಗಡಿಯಲ್ಲಿ ಲೌಡ್ ಸ್ಪೀಕರ್ ಮೂಲಕ ಪಂಜಾಬಿ ಹಾಡು ಭಿತ್ತರಿಸುತ್ತಿದೆ ಚೀನಾ…
ಸಾರಡ್ಕ ಸೇರಿ ನಾಲ್ಕು ಗಡಿಗಳನ್ನು ಮುಕ್ತಗೊಳಿಸಲು ಕೇರಳ ಹೈಕೋರ್ಟ್ ಆದೇಶ
ಕೇಂದ್ರ ಸರಕಾರದ ಆದೇಶಕ್ಕೆ ಕ್ಯಾರೆ ಅನ್ನದ ಕೇರಳ – ಬಿಜೆಪಿಯಿಂದ ಪ್ರತಿಭಟನೆ
ದಕ್ಷಿಣಕನ್ನಡ ಜಿಲ್ಲಾ ಎಲ್ಲಾ ಗಡಿಗಳು ಓಪನ್
You must be logged in to post a comment Login