Connect with us

    LATEST NEWS

    ಕಾಸರಗೋಡಿನಲ್ಲಿ ಸಿಕ್ಕ 7 ಕೋಟಿ ಬೆಲೆಯ 2000 ರೂಪಾಯಿ ನೋಟು ಎಲ್ಲಾ ಖೋಟಾ ನೋಟು

    ಕಾಸರಗೋಡು ಮಾರ್ಚ್ 23: ಕಾಸರಗೋಡು ಜಿಲ್ಲೆಯ ಕಾಞಾಂಗಾಡ್ ಸಮೀಪ ಅಂಬಲತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯೊಂದರಲ್ಲಿ ಪತ್ತೆಯಾದ 2 ಸಾವಿರ ಮುಖಬೆಲೆಯ 7.25 ಕೋಟಿ ರೂ ಹಣದ ಎಲ್ಲಾ ನೋಟುಗಳು ಖೋಟಾ ನೋಟು ಎಂದು ತಿಳಿದು ಬಂದಿದೆ. ಅಂಬಲತ್ತರ ಪಾರಪಳ್ಳಿ ಗುರುಪುರದ ಮನೆಯಲ್ಲಿ ಪತ್ತೆಯಾದ ನೋಟುಗಳನ್ನು ಹಣ ಏಣಿಕೆ ಯಂತ್ರದಲ್ಲಿ ಚೆಕ್ ಮಾಡಿದಾಗ ಎಲ್ಲವೂ ಫೇಕ್ ನೋಟುಗಳು ಎಂದು ಪತ್ತೆಯಾಗಿದೆ.


    ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ನಿವಾಸಿ ಸುಲೈಮಾನ್ ಸಹಿತ ಹಾಗೂ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.ಅಂಬಲತರ ಠಾಣಾ ವ್ಯಾಪ್ತಿಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಸುಳ್ಯದ ಸುಲೈಮಾನ್ ಹಾಗೂ ಪೆರಿಯಾ ನಿವಾಸಿ ಅಬ್ದುಲ್ ರಜಾಕ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರಕರಣದಲ್ಲಿ ಪುತ್ತೂರಿನ ವ್ಯಕ್ತಿ ಓರ್ವರ ಕೈವಾಡ ಇರುವುದು ತನಿಖೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply