Connect with us

LATEST NEWS

ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ತಿರುಗೇಟು ನೀಡಿದ ಕಾಸರಗೋಡು ಜಿಲ್ಲಾಧಿಕಾರಿ

ಕಾಸರಗೋಡು, ಜುಲೈ22 : ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಸರಿಯಾದ ತಿರುಗೇಟು ನೀಡಿದ್ದಾರೆ. ಕೊರೊನಾ ಪ್ರಾರಂಭ ಘಟ್ಟದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಗಡಿ ಬಂದ್ ಮಾಡಿ ಕಾಸರಗೋಡಿನವರು ಬರದಂತೆ ತಡೆದ ದಕ್ಷಿಣಕನ್ನಡ ಜಿಲ್ಲಾಡಳಿತ ಕ್ರಮಕ್ಕೆ ಈಗ ಕಾಸರಗೋಡು ಜಿಲ್ಲಾಡಳಿತ ದಕ್ಷಿಣಕನ್ನಡ ಜಿಲ್ಲೆಯಿಂದ ಕಾಸರಗೋಡಿಗೆ ಯಾವುದೇ ಸರಕು ವಾಹನಗಳ ಪ್ರವೇಶವನ್ನು ತಡೆದಿದ್ದಾರೆ.


ಈ ಕುರಿತಂತೆ ಆದೇಶ ಹೊರಡಿಸಿರುವ ಕಾಸರಗೋಡು ಜಿಲ್ಲಾಧಿಕಾರಿ ಡಾ . ಸಜಿತ್ ಬಾಬು ಕರ್ನಾಟಕದಿಂದ ತರಕಾರಿ, ಹಣ್ಣು ಹಂಪಲು ಮತ್ತು ಮೀನು ಹೇರಿಕೊಂಡು ಬರುವ ವಾಹನಗಳಲ್ಲಿನ ಸರಕುಗಳನ್ನು ಗಡಿ ಪ್ರದೇಶಗಳಲ್ಲಿ ಸಂಬಂಧಪಟ್ಟ ಇತರ ವಾಹನಗಳಿಗೆ ಹಸ್ತಾಂತರಿಸಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಆರೋಗ್ಯ ಇಲಾಖೆಯ ನಿಬಂಧನೆಗಳನ್ನು ಪಾಲಿಸಬೇಕು ಮಾಸ್ಕ್ , ಗ್ಲೌಸ್, ಸಾನಿಟೈಸರ್ ಬಳಕೆ ಕಡ್ಡಾಯವಾಗಿ ಬಳಸಿ, ನಿಬಂಧನೆ ಪಾಲಿಸಿ ಸರಕನ್ನು ಹಸ್ತಾಂತರಿಸಬೇಕು . ಆದೇಶ ಉಲ್ಲಂಘಿಸಿದ್ದಲ್ಲಿ ಮೊಕದ್ದಮೆ ದಾಖಲಿಸಿ , ವಾಹನ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ

ಕರ್ನಾಟಕದಿಂದ ಸರಕು ವಾಹನಗಳಲ್ಲಿ ಬರುವವರಿಗೆ ಕಾಸರಗೋಡುಜಿಲ್ಲೆಗೆ ಪ್ರವೇಶ ಇಲ್ಲ . ಕರ್ನಾಟಕದಿಂದ ವಾಹನಗಳಲ್ಲಿ ಬರುವ ಸರಕನ್ನು ಗಡಿಯಲ್ಲಿ ಕಾಸರಗೋಡಿನ ವಾಹನಗಳಿಗೆ ತುಂಬಿಸಬೇಕು . ಸರಕು ತರುವ ಕಾಸರಗೋಡಿನ ವಾಹನ ಚಾಲಕ , ಸಿಬಂದಿಗಳು ವಾರಕ್ಕೊಮ್ಮೆ ಸಮೀಪದ ಪ್ರಾಥಮಿಕ ಆರೋಗ್ಯ ಕೇದ್ರದಲ್ಲಿ ತಪಾಸಣೆಗೊಳಗಾಗಿ ಕೋವಿಡ್ ಲಕ್ಷಣ ಹೊಂದಿಲ್ಲ ಎಂದು ಸರ್ಟಿಫಿಕೇಟ್ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.


ದೇಶದಲ್ಲಿ ಮೊದಲ ಲಾಕ್ ಡೌನ್ ಸಂದರ್ಭ ದಕ್ಷಿಣಕನ್ನಡ ಜಿಲ್ಲಾಡಳಿತ ಕಾಸರಗೋಡಿನಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಹಿನ್ನಲೆ ಕೇರಳದವರಿಗೆ ಜಿಲ್ಲೆ ಪ್ರವೇಶವನ್ನು ಸಂಪೂರ್ಣ ತಡೆಹಿಡಿದಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಗಳನ್ನೇ ನಂಬಿದ್ದ ಕಾಸರಗೋಡಿನವರಿಗೆ ವೈದ್ಯಕೀಯ ವಿಚಾರಕ್ಕೂ ಮಂಗಳೂರು ಪ್ರವೇಶಕ್ಕೂ ಹರಸಾಹಸ ಪಡುವಂತೆ ದ.ಕ ಜಿಲ್ಲಾಡಳಿತ ಮಾಡಿತ್ತು.  ಸ್ವತಹ ಕಾಸರಗೋಡಿನ ಜಿಲ್ಲಾಧಿಕಾರಿ ತುರ್ತು ವೈದ್ಯಕೀಯ ಸಂಬಂಧಿಸಿದಂತೆ ಜಿಲ್ಲೆ ಪ್ರವೇಶಕ್ಕೆ ಅವಕಾಶ ಕೇಳಿದ್ದರೂ ಕೂಡ ದಕ್ಷಿಣಕನ್ನಡ ಜಿಲ್ಲಾಡಳಿತ ನಿರಾಕರಿಸಿತ್ತು.

ಆದರೆ ಈಗ ಸಂಪೂರ್ಣ ಉಲ್ಟಾ ಆಗಿದ್ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ನಾಗಾಲೋಟದಿಂದ ಓಡುತ್ತಿದೆ. ಇಡೀ ಜಿಲ್ಲೆ ಕೊರೊನಾ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದೆ. ಈ ಹಿನ್ನಲೆ ಈಗ ಕಾಸರಗೋಡಿನ ಸರದಿ ಬಂದಿದ್ದು, ಕಾಸರಗೋಡಿನ ಎಲ್ಲಾ ಗಡಿಗಳನ್ನು ಜಿಲ್ಲಾಡಳಿತ ಬಂದ್ ಮಾಡಿದ್ದು, ಈಗ ಒಂದು ಹೆಜ್ಜೆ ಮುಂದೆ ಹೋಗಿ ಸರಕು ಸಾಗಾಟವನ್ನು ಸಂಪೂರ್ಣವಾಗಿ ತಡೆ ಹಿಡಿದಿದೆ. ಈ ಮೂಲಕ ಕಾಸರಗೋಡು ಜಿಲ್ಲಾಧಿಕಾರಿ ಸರಿಯಾದ ತಿರುಗೇಟನ್ನು ನೀಡಿದ್ದಾರೆ.

Facebook Comments

comments