ಕಾಸರಗೋಡು, ನವೆಂಬರ್ 24: ಕಾಸರಗೋಡಿನ ನುಳ್ಳಿಪಾಡಿಯಲ್ಲಿ “ಫ್ಲೀ’ ಎಂಬ ಯುವ ಸಮೂಹ ಆಯೋಜಿಸಿದ್ದ ಸಂಗೀತ ಉತ್ಸವದ ಸಂದರ್ಭದಲ್ಲಿ ಉಸಿರಾಟದ ತೊಂದರೆಯಿಂದ ಹಲವಾರು ಜನರು ಕುಸಿದು ಬಿದ್ದರು. 
ರವಿವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಕುಸಿದು ಬಿದ್ದವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ಪಡೆದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿದ್ದಾರೆ. ಘಟನೆ ನಡೆದ ವೇಳೆ ಇಲ್ಲಿದ್ದ ಜನಸ್ತೋಮವನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದ್ದಾರೆ.



