ಕಾಸರಗೋಡು ಮೇ 04: ಭಾರೀ ಕುತೂಹಲದಲ್ಲಿರುವ ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿ ಗೆಲವು ಸಾಧಿಸಿದ್ದಾರೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎನ್ ಡಿಎ ಮತ್ತು ಯುಡಿಎಫ್ ಮಧ್ಯೆ ತೀವ್ರ ಸ್ಪರ್ಧೆ ಕಂಡುಬಂದಿತ್ತು, ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂಎಲ್ 8ನೇ ಹಂತದ ಮತ ಎಣಿಕೆಯ ನಂತರ ಸಾವಿರಕ್ಕೂ ಅಧಿಕ ಮತದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಬಳಿಕ ಮುಸ್ಲಿಂ ಲೀಗ್ ಕಲ್ಲಟ್ರ ಮಾಹೀನ್ ಹಾಜಿ ಮುನ್ನಡೆ ಸಾಧಿಸಿದ್ದಾರೆ.

ಮುಸ್ಲಿಂ ಲೀಗ್ ಕಲ್ಲಟ್ರ ಮಾಹೀನ್ ಹಾಜಿ ಅವರು 76,396 ಮತಗಳನ್ನು ಪಡೆದರೆ , ಎನ್ ಡಿಎ ಅಭ್ಯರ್ಥಿ ಅಶ್ವಿನಿ ಎಂಎಲ್ 53,698 ಮತಗಳನ್ನು ಪಡೆದಿದ್ದಾರೆ. ಯುಡಿಎಫ್ ಅಭ್ಯರ್ಥಿ ಮಾಹಿನ್ ಹಾಜಿ ಬರೋಬ್ಬರಿ 22,698 ಮತಗಳಿಂದ ಗೆಲವನ್ನು ಸಾಧಿಸಿದ್ದಾರೆ. ಕೇರಳದಲ್ಲಿ ಬಿಜೆಪಿ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಕ್ಷೇತ್ರಗಳಲ್ಲಿ ಕಾಸರಗೋಡು ಒಂದು, ಆದರೂ ಬಿಜೆಪಿಯವರಿಗೆ ಗೆಲವು ದಾಖಲಿಸಲು ಸಾಧ್ಯವಾಗಿಲ್ಲ.