Connect with us

LATEST NEWS

ಕರ್ನಾಟಕ ಬಂದ್ – ಉಡುಪಿ ಬಸ್ ತಡೆಯಲು ಮುಂದಾದ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು

ಉಡುಪಿ ಸೆಪ್ಟೆಂಬರ್ 28: ಕೇಂದ್ರ ಹಾಗೂ ರಾಜ್ಯ ಸರಕಾರದ ರೈತ ವಿರೋಧಿ ಕೃಷಿ ಮಸೂದೆ ವಿರೋಧಿಸಿ ಕರ್ನಾಟಕ ಬಂದ್ ಹಿನ್ನಲೆ ಉಡುಪಿಯಲ್ಲಿ ರಸ್ತೆ ತಡೆಗೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.


ಬಂದ್ ಗೆ ಕರೆ ನೀಡಿದ್ದರೂ, ಬಸ್ ಸಂಚಾರ ಎಂದಿನಂತೆ ಇದ್ದ ಕಾರಣ ಸಂಘಟನೆಗಳು ಬಸ್ ಬಂದ್ ಮಾಡಲು ಮನವಿ ಮಾಡಿದರು. ಆದರೆ ಇದು ಪ್ರಯೋಜನವಾಗದೇ ಇದ್ದ ಕಾರಣ ರಸ್ತೆ ತಡೆ ಮಾಡಲು ಮುಂದಾಗಿದ್ದು, ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕುಳಿತು ಸರ್ಕಾರ ವಿರುದ್ಧ ಪ್ರತಿಭಟಣಾಕಾರರು ಘೋಷಣೆ ಕೂಗಿದರು. ರಸ್ತೆ ತಡೆಗೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಉಡುಪಿಯಲ್ಲಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಉಂಟಾದ ಗೊಂದಲ ಬಿಟ್ಟರೆ ನಗರದಲ್ಲಿ ಎಂದಿನಂತೆ ಜನ ಸಂಚಾರ ಇದ್ದು, ಆಟೋ ಸೇರಿದಂತೆ ಎಲ್ಲಾ ವಾಹನಗಳು ರಸ್ತೆಗಿಳಿದಿದ್ದು, ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಡುಪಿಯಲ್ಲಿ ಹೊಟೇಸ್ ಸೇರಿದಂತೆ ಎಲ್ಲಾ ಅಂಗಡಿಗಳು ಓಪನ್ ಇದ್ದು ವ್ಯಾಪಾರ ವಹಿವಾಟು ಎಂದಿನಂತೆ ಇದೆ.

Video:

 

Facebook Comments

comments