Connect with us

LATEST NEWS

ಕಾರ್ಕಳ – ಸ್ಕೂಟರ್‌ಗೆ ಬೈಕ್‌‌ ಡಿಕ್ಕಿ ಓರ್ವ ಸಾವು

ಕಾರ್ಕಳ ಜನವರಿ 20: ಸ್ಕೂಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಪ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಚನೆ ನಿನ್ನೆ ನೀಚಾಲಿನ ಸಾಂತೂರು ಎಂಬಲ್ಲಿ ನಡೆದಿದೆ. ಮೃತರನ್ನು ಶ್ರೀಕಾಂತ ಎಂದು ಗುರುತಿಸಲಾಗಿದೆ.


ಜನವರಿ 19 ರಂದು ಸ್ಕೂಟರ್‌‌ನಲ್ಲಿ ಶ್ರೀಕಾಂತ ಹಾಗೂ ಸಹಸವಾರ ರವೀಂದ್ರ ಪೂಜಾರಿ ಅವರು ಬೆಳ್ಮಣ್‌‌ನಿಂದ ಸಾಂತೂರಿಗೆ ಹೋಗಲು ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಸಂದರ್ಭ ರಾತ್ರಿ 7.45ರ ಸುಮಾರಿಗೆ ನೀಚಾಲುವಿನ ಸಾಂತೂರು ಕಡೆಗೆ ಹೋಗಲು ತಿರುವು ತೆಗೆದುಕೊಳ್ಳುತ್ತಿರುವ ಸಂದರ್ಭ ಪಡುಬಿದ್ರೆ ಕಡೆಯಿಂದ ಬೈಕ್‌‌ವೊಂದು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ನ ಎಡಬದಿಗೆ ಡಿಕ್ಕಿ ಹೊಡೆದಿದೆ.

 

ಡಿಕ್ಕಿ ರಭಸಕ್ಕೆ ಸ್ಕೂಟರ್‌ ಸಮೇತ ಶ್ರೀಕಾಂತ ಹಾಗೂ ರವೀಂದ್ರ ಪೂಜಾರಿ ಅವರು ರಸ್ತೆಗೆ ಬಿದ್ದಿದ್ದು, ಶ್ರೀಕಾಂತ ಅವರಿಗೆ ತಲೆಗೆ ಹಾಗೂ ರವಿಂದ್ರ ಪೂಜಾರಿ ಅವರ ಎಡ ಕಾಲು ಮೂಳೆ ಮುರಿದಿದೆ. ಕೂಡಲೇ ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಶ್ರೀಕಾಂತ ಅವರು ಚಿಕತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ