Connect with us

LATEST NEWS

ಲಾರಿ ಚಾಲಕನ ಅವಾಂತರ-ಜನಸಾಮಾನ್ಯ ಪ್ರಾಣ ಉಳಿಸಿದ ಕಾಪು ಎಸೈ ರಾಘವೇಂದ್ರ

ಕಾಪು, ಜನವರಿ 23: ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ66 ರಲ್ಲಿ ಮಹಾರಾಷ್ಟ್ರ ನೋಂದಣಿಯ ಲಾರಿಯನ್ನು ಕುಡಿದ ಅಮಲಿನಲ್ಲಿ ಚಾಲಕ ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದ ಬಗ್ಗೆ ಹಿಂಬದಿಯ ಸವಾರರು ನೀಡಿದ ದೂರಿನಯ್ವಯ ಕಾಪು ಎಸೈ ರಾಘವೇಂದ್ರ ಕೂಡಲೇ ಕಾರ್ಯಪ್ರವೃತರಾಗಿ ಕಾಪುವಿನಲ್ಲಿ ತಡೆದು ನಿಲ್ಲಿಸಿದ ಘಟನೆ ನಡೆದಿದೆ.

ಹೆದ್ದಾರಿಯಲ್ಲಿ ಎರಡು ಮೂರು ಕಡೆ ಚಾಲಕನ ಬೇಜವಬ್ಧಾರಿಯಿಂದ ಆಗುತ್ತಿದ್ದ ಅನಾಹುತ ತಪ್ಪಿತ್ತು ಈ ಬಗ್ಗೆ ಹಿಂಬದಿಯ ಸವಾರರು ಕಾಪು‌ ಎಸೈ ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೆಲವೇ ನಿಮಿಷಗಳಲ್ಲಿ ಲಾರಿಯನ್ನು ತಡೆದು ಚಾಲಕ ಮತ್ತು ‌ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಪು ಎಸೈ ರಾಘವೇಂದ್ರ ಅವರ ಸಮಯ ಪ್ರಜ್ಞೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆಗುತ್ತಿದ್ದ ದೊಡ್ಡ ಅನಾಹುತ ತಪ್ಪಿದೆ ಎಂದು ಸಾರ್ವಜನಿಕರು ಶ್ಲಾಘಿಸಿದರು.

Facebook Comments

comments