Connect with us

LATEST NEWS

ಉಡುಪಿ ಕಾಪು ತಾಲೂಕಿನಲ್ಲಿ ಸೆಲೂನ್ ಬಂದ್ ಗೆ ನಿರ್ಧಾರ

ಉಡುಪಿ ಕಾಪು ತಾಲೂಕಿನಲ್ಲಿ ಸೆಲೂನ್ ಬಂದ್ ಗೆ ನಿರ್ಧಾರ

ಉಡುಪಿ ಮೇ.26: ಕೊರೊನಾ ಸೋಂಕಿತನಿಗೆ ಹೇರ್ ಕಟಿಂಗ್ ಮಾಡಿದ್ದಕ್ಕೆ ಕಾಪು ತಾಲೂಕಿನಾದ್ಯಂತ ಸಲೋನ್ ಬಂದ್ ಮಾಡಲು ನಿರ್ಧರಿಸಲಾಗಿದೆ. ಉಡುಪಿಯ ಜಿಲ್ಲಾಪಂಚಾಯತ್ ಹೊರಗುತ್ತಿಗೆ ನೌಕರನೊಬ್ಬನಿಗೆ ಕೊರೊನಾ ಸೊಂಕು ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

ಉಡುಪಿ ಜಿಪಂ ನ ಹೊರಗುತ್ತಿಗೆ ನೌಕರರಿಗೆ ಸೋಂಕು ತಗುಲಿತ್ತು, ಈತ ಉಡುಪಿಯ ಕಟಪಾಡಿಯ ಸರಕಾರಿ ಗುಡ್ಡೆ ನಿವಾಸಿಯಾಗಿದ್ದು, ಸೋಂಕಿತ ಯುವಕ ವಾರದ ಹಿಂದೆ ಸರಕಾರಿ ಗುಡ್ಡೆಯಲ್ಲಿ ಕ್ಷೌರ ಮಾಡಿಸಿದ್ದ, ಈ ಹಿನ್ನಲೆಯಲ್ಲಿ ಆತಂಕಗೊಂಡಿರುವ ಸೆಲೂನ್ ಮಾಲಕರು ಕೊರೊನಾ ಸೋಂಕು ಹಬ್ಬದಿರಲು ಸೆಲೂನ್ ಬಂದ್ ಗೆ ನಿರ್ಧಾರ ಕೈಗೊಂಡಿದ್ದಾರೆ.

Facebook Comments

comments