LATEST NEWS
ಕಾಪು ಲೈಟ್ ಹೌಸ್ ಬಳಿ ಹೊಳೆಯ ದಿಕ್ಕನ್ನೆ ಬದಲಿಸಿದ ಮಳೆ
ಉಡುಪಿ ಸೆಪ್ಟೆಂಬರ್ 21: ಉಡುಪಿಯಲ್ಲಿ ಸುರಿದ ಭಾರೀ ಮಳೆಗೆ ಕಾಪು ಲೈಟ್ ಹೌಸ್ ಬಳಿಯ ನದಿ ಪಾತ್ರದಿಂದ ನೆರೆ ನೀರು ಸಮುದ್ರ ಸೇರುತ್ತಿದ್ದು ವಿಶ್ವ ಪ್ರಸಿದ್ದ ಲೈಟ್ ಹೌಸ್‌ನ್ನು ಸಂಪರ್ಕಿಸುವ ಕಾಲು ದಾರಿಯ ಮಾರ್ಗವು ಸಂಪೂರ್ಣ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಕಾಪು ಬೀಚ್‌ನಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್‌ನ ಹಿಂಭಾಗದಲ್ಲಿ ಸಮುದ್ರ ಮತ್ತು ನದಿ ನೀರಿನ ಸಂಗಮ ಪ್ರದೇಶವಿದ್ದು, ಮಳೆಯಿಂದಾಗಿ ರವಿವಾರ ಸಂಜೆಯ ವೇಳೆ ನದಿ ಪಾತ್ರವೇ ಬದಲಾಗಿದೆ. ನದಿ ಪಾತ್ರ ಬದಲಾಗಿ ಹರಿದು ಬಂದು ನೀರು ಲೈಟ್ ಹೌಸ್‌ನ ಮುಂದಿನಿಂದಲೇ ಸಮುದ್ರವನ್ನು ಸೇರುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕಾಪು ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತು ತೋಟ ಸೇರಿದಂತೆ ಎಲ್ಲೆಡೆ ಸಂಗ್ರಹವಾಗಿ, ನದಿಯ ಮೂಲಕ ರಭಸವಾಗಿ ಹರಿದು ಬರುತ್ತಿರುವ ಮಳೆ ನೀರು ಲೈಟ್ ಹೌಸ್‌ನ ಮುಂಭಾಗದಿಂದಲೇ ಸಮುದ್ರ ಸೇರುತ್ತಿರುವುದರಿಂದ ಕಾಪು ಲೈಟ್ ಹೌಸ್‌ಗೆ ಹೋಗುವ ಸಂಪರ್ಕವೇ ಕಡಿತಕ್ಕೊಳಗಾಗಿದೆ. ಮಳೆ ನೀರಿನ ಹರಿವು ಇದೇ ಪ್ರಮಾಣದಲ್ಲಿದ್ದರೆ ಲೈಟ್ ಹೌಸ್‌ನ್ನು ಏರುವ ಮೆಟ್ಟಿಲುಗಳಿಗೂ ಹಾನಿಯ ಭೀತಿ ಎದುರಾಗಿದೆ.
ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಪುರಸಭಾ ಸದಸ್ಯರು ಮತ್ತು ಲೈಟ್ ಹೌಸ್ ಡಿಪಾರ್ಟ್‌ಮೆಂಟ್‌ನ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಮುಂಜಾನೆಯಿಂದಲೇ ಇಲ್ಲಿನ ಹಾನಿಯಯನ್ನು ನೋಡಲು ಜನ ಆಗಮಿಸಲಾರಂಭಿಸಿದ್ದಾರೆ.
Facebook Comments
You may like
-
ಜನವರಿ 30 ರಂದು ಬ್ರಹ್ಮಾವರ ತಾಲೂಕಿನ ನೆಂಚಾರು ಮತ್ತು ನಾಲ್ಕೂರಿನಲ್ಲಿ ಗ್ರಾಮ ವಾಸ್ತವ್ಯ ಪೈಲಟ್ ಕಾರ್ಯಕ್ರಮ : ಸದಾಶಿವ ಪ್ರಭು
-
ಉಡುಪಿ ಗಣರಾಜ್ಯೋತ್ಸವ ಸಂಭ್ರಮಕ್ಕೆ ಮೂರು ವರ್ಷದ ಬಾಲೆಯಿಂದ ಮಿಷನ್ ಗನ್ ಭದ್ರತೆ
-
ಉತ್ತಮ ಆಡಳಿತ ಕೊಡುವ ಮನೋಭಾವನೆ ಇದ್ದರೆ ಖಾತೆ ಕ್ಯಾತೆ ಬರುವುದಿಲ್ಲ – ಸಚಿವ ಅಂಗಾರ
-
ಗೋಮಾಳದ ಭೂಮಿಯನ್ನು ಗೋಶಾಲೆಗಳಿಗೆ ನೀಡಲು ಕಂದಾಯ ಮಂತ್ರಿ ಅಸ್ತು
-
ದೊಡ್ಡಣಗುಡ್ಡೆ ರಹ್ಮಾನಿಯಾ ಮಸೀದಿಯಲ್ಲಿ ಉರೂಸ್ ಸಡಗರ
-
ಕೋಳಿ ಕಳ್ಳರಿದ್ದಾರೆ ಎಚ್ಚರಿಕೆ!!! ಭಿಕ್ಷುಕರ ನೆಪದಲ್ಲಿ ಬಂದು, ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಳಿ ಕದಿಯುವ ಕಳ್ಳರನ್ನು ನೋಡಿದಿರಾ?
You must be logged in to post a comment Login