Connect with us

MANGALORE

ಕಾಪು – ಗಾಂಜಾ ಮಾರಾಟಕ್ಕೆ ಯತ್ನ ಇಬ್ಬರ ಬಂಧನ

ಉಡುಪಿ ಅಕ್ಟೋಬರ್ 3: ಕಾರಿನಲ್ಲಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕಾಪು ಪೊಲೀಸರ ತಂಡ ಬಂಧಿಸಿದೆ. ಬಂಧಿತರನ್ನು ಕಕ್ಕುಂಜೆ ನಿವಾಸಿ ಮೊಹಮ್ಮದ್ ಆಲಿ (33) ಮತ್ತು ಮೂಡುಪೆರಂಪಳ್ಳಿ ನಿವಾಸಿ ಶ್ರೀಧರ (32) ಎಂದು ಗುರುತಿಸಲಾಗಿದೆ.


ಉದ್ಯಾವರ ಗ್ರಾಮದ ಜೈಹಿಂದ್ ಕಾಂಪ್ಲೇಕ್ಸ್ ಹತ್ತಿರ ಟವೇರಾ ಕಾರಿನಲ್ಲಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿರುವುದರ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ವಶದಲ್ಲಿದ್ದ ಸುಮಾರು 1 ಕೆ.ಜಿ. 161 ಗ್ರಾಂ ತೂಕದ ಗಾಂಜಾ, ಎರಡು ಮೊಬೈಲ್ ನಗದು 18,600/-ರೂ, ವೆಯಿಂಗ್ ಮೆಷಿನ್ ಮತ್ತು ಗಾಂಜಾ ಮಾರಾಟಕ್ಕೆ ಉಪಯೋಗಿಸುವ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕೃತ್ಯಕ್ಕೆ ಬಳಸಿದ ಕಾರನ್ನು ಕೂಡಾ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 2,24,600 ರೂ. ಆಗಿದೆ. ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ

Facebook Comments

comments