LATEST NEWS
ಉಡುಪಿ ಕೃಷ್ಣ ಮಠದ ಮಹಾದ್ವಾರದಲ್ಲಿ ಕನ್ನಡ ನಾಮಫಲಕ
ಉಡುಪಿ ಡಿಸೆಂಬರ್ 3: ನಾಮಫಲಕ ವಿಚಾರದಲ್ಲಿ ಭಾರಿ ವಿವಾದ ಸೃಷ್ಠಿಸಿದ್ದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ಕನ್ನಡ ನಾಮಫಲಕ ಆಳವಡಿಸಲಾಗಿದೆ.
ಇತ್ತೀಚೆಗೆ ಈ ಹಿಂದೆ ಇದ್ದ ಕನ್ನಡದಲ್ಲಿ ನಾಮಫಲಕವನ್ನು ತೆಗೆದು ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಉಡುಪಿ ಕೃಷ್ಣ ಮಠ ಎಂದು ನಾಮಫಲಕ ಹಾಕಲಾಗಿತ್ತು. ಈ ವಿಚಾರ ರಾಜ್ಯದಲ್ಲಿ ಭಾರೀ ವಿವಾದ ಸೃಷ್ಠಿಸಿದ್ದು, ಕನ್ನಡ ಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿತ್ತು.
ಈಗ ಮತ್ತೆ ಕೃಷ್ಣಮಠದಲ್ಲಿ ಕನ್ನಡ ಫಲಕ ಅಳವಡಿಕೆಯಾಗಿದ್ದು, ಮಠದ ಮುಂದಿನ ಮಹಾದ್ವಾರದಲ್ಲಿ ಕನ್ನಡ ಫಲಕ ಹಾಕಲಾಗಿದ್ದು, ವಿಶ್ವಗುರು ಶ್ರೀ ಮನ್ಮಧ್ವಾಚಾರ್ಯ ಮೂಲಸಂಸ್ಥಾನ, ಶ್ರೀ ಕೃಷ್ಣಮಠ ಉಡುಪಿ ಎಂದು ಬರೆಯಲಾಗಿದೆ. ಎತ್ತರದ ಗೋಪುರದಲ್ಲೇ ಕನ್ನಡ ಫಲಕ ಅಳವಡಿಸುವ ಮೂಲಕ ಪರ್ಯಾಯ ಅದಮಾರು ಮಠದ ಶ್ರೀಗಳು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಉತ್ತರ ನೀಡಿದ್ದಾರೆ.
You must be logged in to post a comment Login