Connect with us

LATEST NEWS

ಬಾಲಿವುಡ್ ನಟಿ ಕಂಗನಾ ರನೌತ್ ಗೆ ಶಿವಸೇನೆ ಮುಖಂಡನ ಬೆದರಿಕೆ…..

ಮುಂಬೈ, ಸೆಪ್ಟಂಬರ್ 3:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಬಳಿಕ ಬಾಲಿವುಡ್ ನಲ್ಲಿ ಬಿರುಗಾಳಿ ಎದ್ದಿವೆ.

ನಟನ ಸಾವಿನ ಬಳಿಕ ಬಾಲಿವುಡ್ ಎರಡು ಹೋಳಾಗಿದ್ದು, ಒಂದು ತಂಡ ಸುಶಾಂತ್ ಸಾವಿನ ಹಿಂದೆ ಆರೋಪಿ ಸ್ಥಾನದಲ್ಲಿರುವ ನಟಿ ರಿಯಾ ಚಕ್ರವರ್ತಿ ಪರ ನಿಂತರೆ, ಇನ್ನೊಂದು ತಂಡ ಸುಶಾಂತ್ ಪರ ನಿಂತಿದೆ. ಈ ನಡುವೆ ಬಾಲಿವುಡ್ ನಲ್ಲಿ ಡ್ರಗ್ಸ್ ದಂಧೆ ಜೋರಾಗಿದ್ದು, ಎಲ್ಲಾ ನಟ-ನಟಿಯರು ಡ್ರಗ್ಸ್ ದಾಸರಾಗಿದ್ದಾರೆ ಎನ್ನುವ ಹೇಳಿಕೆಯನ್ನು ನಟಿ ಕಂಗನಾ ರಾನೌತ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಜೊತೆಗೆ ಡ್ರಗ್ಸ್ ನಲ್ಲಿ ನಿರತ ಬಾಲಿವುಡ್ ಮಂದಿಗೂ, ಮುಂಬಯಿ ಪೋಲೀಸರಿಗೂ ನಿಕಟ ಸಂಪರ್ಕವೂ ಇದೆ ಎನ್ನುವ ಆರೋಪವನ್ನೂ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ಮಹಾರಾಷ್ಟ್ರ ಸರಕಾರ ಕಂಗನಾ ರಾನೌತ್ ಮೇಲೆ ಮುಗಿ ಬಿದ್ದಿದೆ. ಶಿವಸೇನೆಯ ಹಿರಿಯ ಮುಖಂಡ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್ ರಾವತ್ ಕಂಗಾನಾ ಗೆ ಮುಂಬಯಿ ಪೋಲೀಸರ ಮೇಲೆ ನಂಬಿಕೆಯಿಲ್ಲದಿದ್ದರೆ ಆಕೆ ಮುಂಬಯಿ ಪ್ರವೇಶಿಸುವ ಅಗತ್ಯವಿಲ್ಲ ಎನ್ನುವ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

ಈ ಹೇಳಿಕೆಗೆ ಕಂಗಾನಾ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಸಂಜಯ್ ರಾವತ್ ಗೆ ಖಾರವಾದ ಉತ್ತರವನ್ನೇ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಅನಿಸುತ್ತಿದೆ ಎಂದಿದ್ದಾರೆ. ಸುಶಾಂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಭಾರೀ ಬಿರುಗಾಳಿ ಏಳಲಾರಂಭಿಸಿದ್ದು, ಬಾಲಿವುಡ್ ನಲ್ಲಿ ನೆಲೆವೂರಿದ್ದ ಡ್ರಗ್ ಮಾಫಿಯಾದ ಬೇರುಗಳು ಎಳೆ ಎಳೆಯಾಗಿ ಹೊರ ಬರಲಾರಂಭಿಸಿದೆ

Facebook Comments

comments