Connect with us

LATEST NEWS

ಕಂಬ್ಳಪದವಿನ ಸ್ವಾಮೀಜಿ ನಿಧನ ಬೆನ್ನಲ್ಲೇ ಪತ್ನಿಯೂ ಮರಣ !

ಮಂಗಳೂರು, ಜೂನ್ 25 : ಮಂಗಳೂರು ಹೊರವಲಯದ ಮುಡಿಪು ಬಳಿಯ ಕಂಬಳಪದವಿನ ದುರ್ಗಾಕಾಳಿ ಕ್ಷೇತ್ರದ ಸ್ವಾಮಿಯಾಗಿದ್ದ ಬಾಲಗಂಗಾಧರ ಸ್ವಾಮೀಜಿ ಜೂ.21 ರಂದು (72) ಮುಂಬೈನಲ್ಲಿ ನಿಧನರಾಗಿದ್ದು, ನಿನ್ನೆ ಸ್ವಾಮೀಜಿಯ ಪತ್ನಿ ಗೀತಾ ಶೆಟ್ಟಿ (67)ನಿಧನರಾಗಿದ್ದಾರೆ.

ಬಾಲಗಂಗಾಧರನಾಥ ಸ್ವಾಮೀಜಿಯ ಮೊದಲ ಪತ್ನಿಯ ನಿಧನಾ ನಂತರ ಗೀತಾ ಶೆಟ್ಟಿಯವರು ಸ್ವಾಮೀಜಿಯನ್ನು ವಿವಾಹವಾಗಿದ್ದರು. ಮುಂಬೈನ ಅಂಬರ್ ನಾಥ್ ನಲ್ಲಿ ಸ್ವಾಮೀಜಿಯೊಂದಿಗೆ ನೆಲೆಸಿದ್ದ ಅವರು ದೀರ್ಘಕಾಲದ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದು ಪತಿಯ ಅಗಲಿಕೆಯ ನೋವು ಕೂಡ ಅವರನ್ನು ಚಿಂತೆಗೆ ಈಡುಮಾಡಿತ್ತು. ಅವರು ನಿನ್ನೆ ಮನೆಯಲ್ಲಿ ಮಲಗಿದ್ದ ಹಾಸಿಗೆಯಲ್ಲೇ ಸಾವನ್ನಪ್ಪಿದ್ದಾರೆ.

ಮುಂಬೈನಲ್ಲಿ ಶಾಖಾ ಮಠ ಹೊಂದಿದ್ದ ಸ್ವಾಮೀಜಿ ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಮುಡಿಪಿಗೆ ಬರುತ್ತಿದ್ದರು. ಮುಂಬೈನ ಅಂಬರನಾಥ್ ಎಂಬಲ್ಲಿ ದುರ್ಗಾಕಾಳಿ ಮಂದಿರದಲ್ಲಿ ನೆಲೆಸಿದ್ದ ಸ್ವಾಮೀಜಿ ಜೂನ್ 21 ರಂದು ನಿಧನರಾಗಿದ್ದರು. ಮಗನಿಗೆ ಕೊರೊನಾ ಪಾಸಿಟಿವ್ ಆಗಿದ್ದರಿಂದ ಸ್ವಾಮೀಜಿಗೂ ಕೊರೊನಾ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.