Connect with us

LATEST NEWS

ರಂಗೋಲಿಯಲ್ಲಿ ಮೂಡಿ ಬಂದ ಕಲ್ಲಡ್ಕ ಕೆಟಿ ಚಹಾದ ಸುಂದರ ದೃಶ್ಯ…!!

ಉಡುಪಿ ಜೂನ್ 02: ಮಂಗಳೂರು ಬೆಂಗಳೂರು ಹೆದ್ದಾರಿಯಲ್ಲಿರೋ ಕಲ್ಲಡ್ಕದ ಕೆಟಿ ಚಹಾ ಯಾರಿಗೆ ಗೊತ್ತಿಲ್ಲ. ಈ ಚಹಾ ಕುಡಿಯದವರು ಬಹಳ ಕಡಿಮೆ. ಕೆಟಿ ತಯಾರು ಮಾಡೋದೆ ಒಂದು ಸ್ಪೆಶಲ್ ಈ ದೃಶ್ಯವನ್ನು ರಂಗೋಲಿ ಮೂಲಕ ಬಿಡಿಸಿದ್ದಾರೆ ಖ್ಯಾತ ಕಲಾವಿದ ಸೂರ್ಯ ಪುರೋಹಿತ್. ಸದ್ಯ ಕಲಾವಿದ ಈ ರಂಗೋಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ರಂಗೋಲಿಯಲ್ಲಿ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟ ಅದ್ಭುತ ಕಲಾವಿದ ಕಾರ್ಕಳದ ಸೂರ್ಯ ಪುರೋಹಿತ್ ಇದುವರೆಗೂ ಬಳಸಿರದ ಹಲವು ಕಲರ್ ಮಿಕ್ಸಿಂಗ್ ಮೂಲಕ ಕಲ್ಲಡ್ಕದ ಕೆಟಿ ತಯಾರಿಯ ಸುಂದರ ರಂಗೋಲಿ ಹಾಕಿದ್ದಾರೆ.

ಎಸ್ಪಿ ಬಿ ಸಾಲುಮರದ ತಿಮ್ಮಕ್ಕ ಪೇಜಾವರ ಸ್ವಾಮೀಜಿ ಜೇಸುದಾಸ್ ಸುಧಾ ಮೂರ್ತಿ ಹೀಗೆ ನೂರಾರು ಖ್ಯಾತ ನಾಮರ ರಂಗೋಲಿ ಚಿತ್ರ ಬಿಡಿಸಿದ ಸೂರ್ಯ ಪುರೋಹಿತ್ ಸದ್ಯ ಕೆಟಿ ರಂಗೋಲಿ ಮೂಲಕ ಫೇಮಸ್ ಆಗಿದ್ದಾರೆ.