Connect with us

    LATEST NEWS

    ಅಮೇರಿಕಾದ ಪ್ರಥಮ ಮಹಿಳೆಗೆ ನೀತಿ ನಿರ್ದೇಶಕಿಯಾಗಿ ಕುಂದಾಪುರದ ಮಾಲಾ ಅಡಿಗ

    ಉಡುಪಿ ನವೆಂಬರ್ 22: ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಂಪುಟ ಇದೀಗ ಭಾರತೀಯರಿಂದಲೇ ತುಂಬಿ ತುಳುಕುತ್ತಿದೆ. ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ನೀತಿ ನಿರ್ದೇಶಕಿಯಾಗಿ ಮಾಲಾ ಅಡಿಗ ನೇಮಕಗೊಂಡಿದ್ದಾರೆ.


    ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಕಕ್ಕುಂಜೆ ಮಾಲಾ ಅಡಿಗರ ಮೂಲ ಎಂಬುದು ವಿಶೇಷ. ಕಕ್ಕುಂಜೆ ರಮೇಶ್ ಅಡಿಗ ಹಾಗೂ ಜಯಾ ಅಡಿಗ ದಂಪತಿಯ ಹಿರಿಯ ಪುತ್ರಿಯಾಗಿರುವ ಮಾಲಾ ಅಡಿಗ ಅಮೆರಿಕದಲ್ಲಿಯೇ ಹುಟ್ಟಿ ಬೆಳೆದವರು. ಕಾನೂನು ಪದವಿ ಪಡೆದು ವಕೀಲಿ ವೃತ್ತಿಯಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ತಂದೆ ರಮೇಶ್ ಅಡಿಗರು ಬೆಂಗಳೂರಿನಲ್ಲಿ ಎಂಬಿಬಿಎಸ್‌ ಮುಗಿಸಿದ ಕೂಡಲೇ ಅಮೆರಿಕಕ್ಕೆ ತೆರಳಿ ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾಗಿದ್ದಾರೆ.


    ಜೋ ಬೈಡೆನ್ ಪತ್ನಿ ಜಿಲ್ ಬೈಡೆನ್ ಅಮೆರಿಕದ ಪಥಮೆ ಮಹಿಳೆಯಾಗಿದ್ದಾರೆ. ಇದೀಗ ಮಹತ್ವ ಬಿಲ್ ಬೈಡೆನ್ ಅವರ ಪಾಲಿಸಿ ನಿರ್ದೇಶಕರಾಗಿ ಮಾಲಾ ಅಡಿಕ ಆಯ್ಕೆಯಾಗಿದ್ದಾರೆ. ಕಳೆದ 50 ವರ್ಷಗಳಿಂದ ಮಾಲಾ ಅಡಿಗ ಕುಟುಂಬ ಅಮೆರಿಕದಲ್ಲಿ ವಾಸವಾಗಿದೆ.

    ಈ ಹಿಂದೆ ಬಿಡೆನ್ ಫೌಂಡೇಶನ್ ನ ಉನ್ನತ ಶಿಕ್ಷಣ ನಿರ್ದೇಶಕಿಯಾಗಿ ಮಾಲಾ ಅಡಿಗ ಸೇವೆ ಸಲ್ಲಿಸಿದ್ದಾರೆ. ಬರಾಕ್ ಒಬಾಮಾಗೆ ಶಿಕ್ಷಣ, ಸಾಂಸ್ಕೃತಿಕ ವಿಭಾಗದ ಉಪ ಸಹಾಯಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಅನುಭವವಿದೆ. ಇನ್ನು ಮಾಲಾ ಅಮೇರಿಕಾದ ನ್ಯಾಶನಲ್ ಸೆಕ್ಯೂರಿಟಿ ಸ್ಟಾಫ್ ನಲ್ಲಿ ಮಾನವ ಹಕ್ಕುವಿಭಾಗದ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.


    ಮಾಲಾ ಅಡಿಗ ತಂದೆ ರಮೇಶ್ ಅಡಿಗ ಅಮೇರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಲಾ ಅಡಿಗ ಅಮೇರಿಕಾದಲ್ಲೇ ಹುಟ್ಟಿ ಬೆಳೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply