ಮಂಗಳೂರು ನವೆಂಬರ್ 20: ಕದ್ರಿ ಮಂಜುನಾಥ ದೇವಾಲಯದಲ್ಲಿ ಲಕ್ಷದಿಪೋತ್ಸವ ನಡೆಯಿತು. ಲಕ್ಷದಿಪೋತ್ಸವ ಅಂಗವಾಗಿ ದೇವಸ್ಥಾವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಪೂಜೆಗಳು, ಅಭಿಷೇಕಗಳು ಜರುಗಿದವು.


ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವಿಶೇಷವಾಗಿ ಲಕ್ಷ ದೀಪೋತ್ಸವ, ಶ್ರೀ ಅಯ್ಯಪ್ಪ ಭಕ್ತ ವೃಂದ ಇವರಿಂದ ಸಾಮೂಹಿಕ ಸೀಯಾಲಭಿಷೇಕ, ಮಧ್ಯಾಹ್ನ ಗಂಟೆ 12 ಕ್ಕೆ ಅಯ್ಯಪ್ಪ ದೇವರಿಗೆ ಮಹಾ ಪೂಜೆ, ಗಂಟೆ 12.30ಕ್ಕೆ ಶ್ರೀ ಮಂಜುನಾಥ ದೇವರಿಗೆ ಮಹಾ ಪೂಜೆ, ನಂತರ ಅನ್ನದಾನ ನೆರವೇರಿತು. ಸಾಯಂಕಾಲ ಸಂಜೆ 7ಕ್ಕೆ ಶ್ರೀ ಅಯ್ಯಪ್ಪ ದೇವರಿಗೆ ಸಾಮೂಹಿಕ ರಂಗ ಪೂಜೆ, ರಾತ್ರಿ 8 ಗಂಟೆಗೆ ತುಳಸಿ ಪೂಜೆ, 9 ಗಂಟೆಗೆ ಶ್ರೀ ಮಂಜುನಾಥ ದೇವರಿಗೆ ಮಹಾ ಪೂಜೆ, ನಂತರ ದೇವರ ಬಲಿ, ಗುರ್ಜಿ ದೀಪೋತ್ಸವ, ಉತ್ಸವ ಬಲಿ, ರಥೋತ್ಸವ ನೆರವೇರಿತು.

Share Information