LATEST NEWS
ಕಲ್ಲಡ್ಕ್ ಪ್ರಭಾಕರ ಭಟ್ ಬಾಯಲ್ಲಿ ಪಾಕಿಸ್ತಾನದ ಹೆಸರು – ಯು.ಟಿ ಖಾದರ್
ಮಂಗಳೂರು ನವೆಂಬರ್ 3: ದೇಶದ ಮೇಲೆ ಪ್ರೀತಿ ಪ್ರೇಮ ಇರುವರು ಹೇಳುವ ಹೇಳಿಕೆ ಇದಲ್ಲ ಎಂದು ಉಳ್ಳಾಲವನ್ನ ಪಾಕಿಸ್ತಾನ ಎಂದು ಕರೆದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ಅವರ ಹೇಳಿಕೆಗೆ ಶಾಸಕ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಕಲ್ಲಡ್ಕ ಪ್ರಭಾಕರ ಭಟ್ಟರು ತಾವು ನೀಡಿರುವ ಹೇಳಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಪ್ರತಿಯೊಬ್ಬರೂ ಈ ರೀತಿಯ ಹೇಳಿಕೆಗಳನ್ನು ಹೇಳಿಕೊಂಡು ಬಂದಲ್ಲಿ ಇದು ಸಮಾಜ ಹಾಗೂ ದೇಶಕ್ಕೆ ಪೂರಕವಾಗಿರುವುದಿಲ್ಲ ಎಂದು ಶಾಸಕ ಯು ಟಿ ಖಾದರ್ ತಿರುಗೇಟು ನೀಡಿದರು.
ಭಾರತದಂತಹ ದೇಶದಲ್ಲಿದ್ದು, ಪಾಕಿಸ್ತಾನದ ಹೆಸರು ಹೇಳಲು ನಮಗೆ ನಾಚಿಕೆಯಾಗುತ್ತದೆ. ಪಾಕಿಸ್ತಾನ ಎಂಬ ಪದವನ್ನು ನಮ್ಮ ಬಾಯಿಯಲ್ಲಿ ಹೇಳಲು ನಮಗೆ ಮುಜುಗರವಾಗುತ್ತದೆ. ಅಂತಹ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಗಳು ಕಲ್ಲಡ್ಕ ಪ್ರಭಾಕರ ಭಟ್ಟರ ಬಾಯಿಯಲ್ಲಿ ಬರುತ್ತದೆ ಎಂದು ಆಶ್ಚರ್ಯವಾಗುತ್ತದೆ.ಸಾರ್ವಜನಿಕ ಹೇಳಿಕೆಗಳು ಸಮಾಜದ ಒಗ್ಗಟ್ಟಿಗೆ ಪೂರಕವಾಗಿರಬೇಕು. ಆದ್ದರಿಂದ ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್ಟರ ಈ ರೀತಿಯ ಹೇಳಿಕೆ ಉಳ್ಳಾಲ ಕ್ಷೇತ್ರದ ಪ್ರತಿಯೊಬ್ಬರಿಗೂ ಅತ್ಯಂತ ನೋವನ್ನುಂಟು ಮಾಡಿದೆ ಎಂದು ಖಾದರ್ ಹೇಳಿದರು.
ನನಗೆ ಉಳ್ಳಾಲದ ಕಣ ಕಣದಲ್ಲಿ ಭಾರತದ ಬಹುಸಂಸ್ಕೃತಿ ಕಂಡು ಬರುತ್ತದೆ. ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಏನೋ ಮಾತನಾಡಿದ್ದಾರೆ. ಆದ್ದರಿಂದ ಯಾರೂ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಖಾದರ್ ಮನವಿ ಮಾಡಿದರು.
Facebook Comments
You may like
-
ಕೊರೊನಾ ಲಸಿಕೆ ಬಡಪಾಯಿಗಳ ಬದಲು ಮೊದಲು ಜನಪ್ರತಿನಿಧಿಗೆ, ಅಧಿಕಾರಿಗಳಿಗೆ ನೀಡಿ – ಮಾಜಿ ಆರೋಗ್ಯ ಸಚಿವರ ಸಲಹೆ
-
ಉಳ್ಳಾಲದ ಭೀಫ್ ಅಂಗಡಿಗೆ ಬೆಂಕಿ- ಮತೀಯ ಉದ್ವಿಗ್ನತೆ ಸ್ರಷ್ಟಿಸುವ ಪ್ರಯತ್ನದ ಮುಂದುವರಿದ ಭಾಗ
-
ಡಿಕೆಶಿ ಸಲಹೆ ಮೆರೆಗೆ ಯುವ ಕಾಂಗ್ರೇಸ್ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಿಂದ ಹಿಂದೆ ಸರಿದ ಮಿಥುನ್ ರೈ
-
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ
-
ದನದ ಮಾಂಸವನ್ನು ನಾನು ತಿನ್ನುತ್ತೇನೆ: ಸಿದ್ದರಾಮಯ್ಯ
-
ಇಂಟರ್ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಪ್ರವಹಿಸಿ ಆರ್ ಎಸ್ಎಸ್ ಕಾರ್ಯಕರ್ತ ಸಾವು
You must be logged in to post a comment Login