LATEST NEWS
ವ್ಯಾಪಾರ ಮಾಡುವುದು ಸರಕಾರದ ಕೆಲಸವಲ್ಲ – ಯು.ಟಿ ಖಾದರ್
ಮಂಗಳೂರು ಅಗಸ್ಟ್ 19: ದಕ್ಷಿಣಕನ್ನಡ ಜಿಲ್ಲೆಯ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಮಾತಿನಂತೆ ಆದೇಶಗಳನ್ನು ಹೊರಡಿಸುತ್ತಿರುವುದು ದುರದೃಷ್ಠಕರ ಎಂದು ಶಾಸಕ ಯು.ಟಿ ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ನೆಪಹೇಳಿ ಏಕಾಏಕಿ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳನ್ನು ಎಪಿಎಂಸಿ ಸ್ಥಳಾಂತರ ಮಾಡಿದ್ದರು. ಆದರೆ ಅಲ್ಲಿ ಯಾವುದೇ ಮೂಲಭೂತ ಸೌಕರ್ಯ ನೀಡದೇ ಭಾರೀ ಮಳೆಯಿಂದಾಗಿ ಎಪಿಎಂಸಿಯಲ್ಲಿ ತೀವ್ರ ಸಮಸ್ಯೆ ಉಂಟಾಗಿದ್ದು, ಇದರಿಂದಾಗಿ ವ್ಯಾಪಾರಿಗಳಿಗೆ ಬಹಳ ಕಷ್ಟ ಉಂಟಾಗಿದೆ. ಬಳಿಕ ಆಗಸ್ಟ್ 13 ರಂದು ಹೈಕೋರ್ಟ್ನಲ್ಲಿದ್ದ ಪ್ರಕರಣವನ್ನು ಮಂಗಳೂರು ಮಹಾನಗರ ಪಾಲಿಕೆ ಹಿಂತೆಗೆದುಕೊಂಡಿದ್ದು ಚಿಲ್ಲರೆ ವ್ಯಾಪಾರಿಗಳು ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಿಸಿದ್ದರು ಎಂದಿದ್ದಾರೆ.
ಆದರೆ ಜಿಲ್ಲಾಡಳಿತ ಮಾತ್ರ ಕೆಲವು ರಾಜಕೀಯ ವ್ಯಕ್ತಿಗಳ ಒಪ್ಪಿಗೆಯಂತೆ ಆದೇಶ ಹೊರಡಿಸುತ್ತಿರುವುದು ದುರದೃಷ್ಟಕರ. ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಸರ್ಕಾರವು ಕಾಳಜಿಯನ್ನು ಹೊಂದಿದ್ದರೆ, ಅವರು ಕೇಂದ್ರ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು ಹಾಗೂ ಬಂದರ್ನಲ್ಲಿರುವ ಮೀನು ಮಾರಾಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕಾಗಿತ್ತು. ಈಗ ಎಪಿಎಂಸಿ ಅಧ್ಯಕ್ಷರು ವ್ಯಾಪಾರಿಗಳು ಎಪಿಎಂಸಿಗೆ ವಾಪಾಸ್ ಬರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿದಾಗ ಅವರು ಯಾಕೆ ಮೌನವಾಗಿದ್ದರು ಎಂದು ಪ್ರಶ್ನಿಸಿರುವ ಅವರು, ವ್ಯಾಪಾರ ಮಾಡುವುದು ಸರ್ಕಾರದ ಕೆಲಸವಲ್ಲ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
Facebook Comments
You may like
ತೈಲ ದರ ಹೆಚ್ಚಾದರೂ ಚಿಂತೆಯಿಲ್ಲ ಎನ್ನುವವರಿಗೆ ಲೀಟರಿಗೆ 1 ಸಾವಿರ ದರ ವಿಧಿಸಿ : ಯು.ಟಿ. ಖಾದರ್
ಶಾಸಕ ಯುಟಿ ಖಾದರ್ ಸಹೋದರ ಇಫ್ತಿಕಾರ್ ನಿವಾಸದ ಮೇಲೆ ಐಟಿ ದಾಳಿ
ಬಡವರ ಬಿಪಿಎಲ್ ಕಾರ್ಡ್ ಮಾತ್ರ ಬಿಜೆಪಿ ಸರಕಾರಕ್ಕೆ ಕಾಣೋದು – ಯುಟಿ ಖಾದರ್
ಕೊರೊನಾ ಲಸಿಕೆ ಬಡಪಾಯಿಗಳ ಬದಲು ಮೊದಲು ಜನಪ್ರತಿನಿಧಿಗೆ, ಅಧಿಕಾರಿಗಳಿಗೆ ನೀಡಿ – ಮಾಜಿ ಆರೋಗ್ಯ ಸಚಿವರ ಸಲಹೆ
ಮಾಜಿ ಸಚಿವ ಯು.ಟಿ ಖಾದರ್ ಅವರ ಫಾಲೋ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ
ಕರ್ನಾಟಕದ ಕಾನೂನಿಗೆ ಅರೇಬಿಕ್ ನ ಜಿಹಾದ್ ಪದವೇಕೆ – ಖಾದರ್
You must be logged in to post a comment Login