Connect with us

    DAKSHINA KANNADA

    ಕಡಬ: ಅನ್ಯಮತೀಯ ಯುವಕರ ಕೊಠಡಿಯಲ್ಲಿ ಯುವತಿ ಪತ್ತೆ.!

    ಕಡಬ, ನವೆಂಬರ್ 29: ಯುವತಿಯೋರ್ವಳು ಅನ್ಯಮತೀಯ ಯುವಕನ ಜತೆಗಿದ್ದ ಘಟನೆ ಅಲಂಕಾರು ಸಮೀಪದ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ನ.27 ರ ಭಾನುವಾರ ಸಂಜೆ ನಡೆದಿದೆ.

    ಯುವತಿ ಮಂಜೇಶ್ವರ ಮೂಲದವಳಾಗಿದ್ದು, ಮುಡಿಪು ಮೂಲದ ಮುಸ್ಲಿಂ ಯುವಕನ ಸಂಪರ್ಕದಲ್ಲಿದ್ದು, ಪ್ರಸ್ತುತ ಆತ ಕೆಲಸದ ನಿಮಿತ್ತ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿದ್ದು, ಅಲ್ಲಿಗೆ ಯುವತಿಯನ್ನು ಬರುವಂತೆ ಹೇಳಿದ್ದ.

    ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಯುವಕನ ರೂಮ್ ಮಾಡಿಕೊಂಡಿದ್ದ ಸ್ಥಳಕ್ಕೆ ಧಾವಿಸಿದ್ದರು. ಅವರು ಬರುತ್ತಿದ್ದಂತೆ ಯುವಕನು ಯುವತಿಯನ್ನು ಹಿಂಬಾಗಿಲಿನ ಮೂಲಕ ಹೊರಗೆ ಕಳುಹಿಸಿ ಆತನೂ ಅಲ್ಲಿಂದ ಕಾಲ್ಕಿತ್ತಿದ್ದಾನೆ .

    ಜಾಗರಣ ವೇದಿಕೆಯ ಕಾರ್ಯಕರ್ತರು ಯುವತಿಯ ಬಗ್ಗೆ ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಪೋಷಕರಿಗೆ ಒಪ್ಪಿಸಿದ್ದಾರೆ.

    ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಕೊಠಡಿಯಲ್ಲಿ ಇಬ್ಬರು ಮುಸ್ಲಿಂ ಯುವಕರಿದ್ದು, ಈ ಬಾಲಕಿಯನ್ನು ಕೊಠಡಿಗೆ ಕರೆತಂದ ಯುವಕನ ಹೆಸರು ಸವಾದ್ ಎಂದು ತಿಳಿಸಿದ್ದಾರೆ. ಕಾರ್ಯಕರ್ತರು ಬಂದಾಗ ಇಬ್ಬರೂ ಯುವಕರು ಕೊಠಡಿಯಿಂದ ಪರಾರಿಯಾಗಿದ್ದಾರೆ. ಕಡಬ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply