Connect with us

KARNATAKA

ಜೂನ್ 6 ರಂದು ಕೇರಳ ಹಾಗೂ ಕರ್ನಾಟಕ ಕರಾವಳಿಗೆ ಮುಂಗಾರು ಪ್ರವೇಶ

ಜೂನ್ 6 ರಂದು ಕೇರಳ ಹಾಗೂ ಕರ್ನಾಟಕ ಕರಾವಳಿಗೆ ಮುಂಗಾರು ಪ್ರವೇಶ

ಮಂಗಳೂರು ಜೂನ್ 1: ಈ ಬಾರಿ ಕೇರಳ ಹಾಗೂ ಕರ್ನಾಟಕ ರಾಜ್ಯಗಳಿಗೆ ಒಂದೇ ಬಾರಿ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ. ಈಗಾಗಲೇ ತಿಳಿಸಿರುವಂತೆ ಜೂನ್ 6 ರಂದು ಮುಂಗಾರು ಕೇರಳ ಪ್ರವೇಶಿಸಲಿದ್ದು ಅದೇ ದಿನ ಕರ್ನಾಟಕಕ್ಕೂ ಮುಂಗಾರು ಪ್ರವೇಶಿಸಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಸಾಧಾರಣವಾಗಿ ಮುಂಗಾರು ಕೇರಳ ಪ್ರವೇಶಿಸಿದ ನಂತರ ಒಂದೆರಡು ದಿನ ಬಿಟ್ಟು ಕರ್ನಾಟಕ ಪ್ರವೇಶಿಸುತ್ತದೆ. ಆದರೆ ಈ ಬಾರಿ ಒಟ್ಟಿದೆ ಮುಂಗಾರು ಪ್ರವೇಶಿಸಲಿದೆ. ಹಿಂದೆ ಹಲವು ಬಾರಿ ಕೇರಳ ಕರ್ನಾಟಕಕ್ಕೆ ಒಂದೇ ಬಾರಿ ಮುಂಗಾರು ಪ್ರವೇಶಿಸಿದ ಉದಾಹರಣಗಳಿದ್ದು, ಈ ಬಾರಿ ಅದೇ ರೀತಿ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಈ ಭಾರಿ ಮುಂಗಾರು ವಾಡಿಕೆಯಷ್ಟು ಮಳೆಯಾಗಲಿದ್ದು, ದಕ್ಷಿಣ ಭಾರತದಲ್ಲಿ ಶೇಕಡ 97 ರಷ್ಟು ಮಳೆಯಾಗುವ ಸಾಧ್ಯತೆ ಇದೆ.

Facebook Comments

comments