ನವದೆಹಲಿ ಡಿಸೆಂಬರ್ 14: WWE ಸೂಪರ್‌ಸ್ಟಾರ್‌ ಜಾನ್ ಸೀನಾ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಅದು ಕೊನೆಯ ಪಂದ್ಯದಲ್ಲಿ ಸೋಲಿನ ಮೂಲಕ ವಿದಾಯ ಹೇಳಿದ್ದಾರೆ.


ಶನಿವಾರ ರಾತ್ರಿ ಗುಂಥರ್ ವಿರುದ್ಧದ ವಿದಾಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಅದ್ಭುತ ಕುಸ್ತಿ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಸೀನಾ ಅವರ 23 ವರ್ಷಗಳ ಅದ್ಭುತ ವೃತ್ತಿಜೀವನಕ್ಕೆ ಸೂಕ್ತವಾದ ಬೀಳ್ಕೊಡುಗೆ ಸಿಗಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಆದರೆ, ವಿದಾಯ ಪಂದ್ಯವನ್ನು ಸೋತಿದ್ದರಿಂದ ವಿಶ್ವದಾದ್ಯಂತ ಫ್ಯಾನ್ಸ್ ನಿರಾಶೆಗೊಂಡಿದ್ದಾರೆ.


2002ರ ಜೂನ್ 27 ರಂದು ಸ್ಮ್ಯಾಕ್‌ಡೌನ್‌ನಲ್ಲಿ ಜಾನ್‌ ಸೀನಾ WWE ಗೆ ಪಾದಾರ್ಪಣೆ ಮಾಡಿದರು. ಮುಂದಿನ ಎರಡು ದಶಕಗಳಲ್ಲಿ, ಸೀನಾ ಪ್ರಚಾರದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾದರು. 17 ಬಾರಿ WWE ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇಂಟರ್‌ಕಾಂಟಿನೆಂಟಲ್ ಪ್ರಶಸ್ತಿ ಸೇರಿದಂತೆ WWE ನ ಪ್ರಮುಖ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವ ಮೂಲಕ ಗ್ರ್ಯಾಂಡ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ್ದಾರೆ. ಜಾನ್‌ ಸೀನಾ ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ.

2024ರ ಜುಲೈ 6 ರಂದು ನಡೆದ ಮನಿ ಇನ್ ದಿ ಬ್ಯಾಂಕ್ ಪ್ರೀಮಿಯಂ ಲೈವ್ ಈವೆಂಟ್‌ನಲ್ಲಿ, 2025 ರ ಅಂತ್ಯದಲ್ಲಿ WWEಗೆ ನಿವೃತ್ತಿ ಹೇಳುವುದಾಗಿ ಜಾನ್‌ ಸೀನಾ ಘೋಷಿಸಿದ್ದರು.

Share Information