Connect with us

    LATEST NEWS

    ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಎಗರಿಸಿದ ಕಳ್ಳ..ಅಟ್ಟಿಸಿಕೊಂಡು ಹೋಗಿ ಹಿಡಿದ ಜ್ಯುವೆಲ್ಲರಿ ಶಾಪ್ ಮಾಲಕ

    ಮಂಗಳೂರು ಮಾರ್ಚ್ 5: ಮಂಗಳೂರಿನ ನಗರದ ಹೃದಯ ಭಾಗದಲ್ಲಿರುವ ಜ್ಯುವೆಲ್ಲರಿ ಶಾಪ್ ಒಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮನೋರ್ವ ಹಾಡಹಗಲಿನಲ್ಲಿಯೇ ಆಭರಣದೊಂದಿಗೆ ಪರಾರಿಯಾಗಲೆತ್ನಿಸಿದಾಗ ಜ್ಯುವೆಲ್ಲರಿ ಶಾಪ್ ಮಾಲಕರೇ ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.


    ಅರುಣ್ ಜಿ. ಶೇಟ್ ಅವರ ಒಡೆತನದ ನಗರದ ರಥಬೀದಿಯಲ್ಲಿರುವ ಅರುಣ್ ಜಿ. ಶೇಟ್ ಜ್ಯುವೆಲ್ಲರಿ ಆ್ಯಂಡ್ ಡೈಮಂಡ್ ವರ್ಕ್ಸ್ ಶಾಪ್ ಗೆ ನಿನ್ನೆ ಮಧ್ಯಾಹ 2 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಬಂದ ಈ ಖದೀಮ, ಆಭರಣವನ್ನು ಕೊಳ್ಳಲು ನೋಡುವವನಂತೆ ನಟಿಸಿದ್ದಾನೆ. ಮಾಲಕ ಅರುಣ್ ಜಿ.ಶೇಟ್ ಅವರೇ ಆತನಿಗೆ ಆಭರಣ ತೋರಿಸುತ್ತಿರುವಾಗಲೇ ಆತ ಏಕಾಏಕಿ ಆಭರಣದೊಂದಿಗೆ ಓಟಕ್ಕಿತ್ತಿದ್ದಾನೆ.


    ಆತ ಓಡುತ್ತಿರುವುದನ್ನು ಗಮನಿಸಿದ ಜ್ಯುವೆಲ್ಲರಿ ಶಾಪ್ ಅರುಣ್ ಜಿ ಶೇಟ್ ಅವರು ಅವನನ್ನು ಬೆನ್ನಟಿದ್ದಾರೆ‌. ಸ್ವಲ್ಪ ದೂರ ಹೋಗುತ್ತಲೇ ಆತ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಷ್ಟರಲ್ಲಾಗಲೇ ಸ್ಥಳದಲ್ಲಿದ್ದವರಿಗೆ ವಿಷಯ ತಿಳಿದಿದ್ದು, ಈ ಸಂದರ್ಭ ಅಲ್ಲಿ ಸಾಕಷ್ಟು ಜನರು ಜಮಾಯಿಸಿದ್ದಾರೆ. ಈ ಎಲ್ಲಾ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.


    ಬಳಿಕ ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ‌. ಈ ಬಗ್ಗೆ ಬಂದರ್ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

    Share Information
    Advertisement
    Click to comment

    Leave a Reply

    Your email address will not be published. Required fields are marked *